3.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಕೆಳಕಂಡ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ:
|
1.ಕ.ರಾ.ರ.ಸಾ.ನಿಗಮ:
|
1) ಕೇಂದ್ರಿಯ ತರಬೇತಿ ಕೇಂದ್ರ, ಬೆಂಗಳೂರು
|
2) ಪ್ರಾದೇಶಿಕ ತರಬೇತಿ ಕೇಂದ್ರ, ಮಳವಳ್ಳಿ
|
3) ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ
|
|
2.ಬೆಂ.ಮ.ಸಾ.ಸಂಸ್ಥೆ:
|
1)ಚಾಲಕ ತರಬೇತಿ ಕೇಂದ್ರ, ವಡ್ಡರಹಳ್ಳಿ, ಬೆಂಗಳೂರು
|
|
3.ಈ.ಕ.ರ.ಸಾ.ನಿಗಮ:
|
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ್
|
2) ಚಾಲಕ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿ
|
|
4.ವಾ.ಕ.ರ.ಸಾ.ನಿಗಮ:
|
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿ
|
|
ಅ) ನಿಗದಿಪಡಿಸಿರುವ ಅರ್ಹತೆಗಳು:
|
1) ವಯೋಮಿತಿ: ಕನಿಷ್ಠ 21 ವರ್ಷಗಳು ಗರಿಷ್ಠ 35 ವರ್ಷಗಳು ಪೂರ್ಣಗೊಂಡಿರಬೇಕು.
|
2) ಎಲ್.ಎಂ.ವಿ ಪರವಾನಗಿ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಟ್ರ್ಯಾಕ್ಟರ್
ಎಲ್.ಎಂ.ವಿ ಆಗಿದ್ದರೆ ಪರವಾನಗಿ ಪಡೆದು 2 ವರ್ಷ ಪೂರ್ಣಗೊಂಡಿರಬೇಕು.
|
3) ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.
|
|
ಆ) ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಸೌಲಭ್ಯಗಳ ವಿವರಗಳು:
|
1) ಉಚಿತ ಊಟ ಮತ್ತು ವಸತಿ ವ್ಯವಸ್ಥೆ.
|
2) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆ ಹಾಗೂ ರೂ.500/- ಸಮವಸ್ತ್ರ
ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡಲಾಗುವುದು.
|
|
4.ಜಿಲ್ಲಾ ಮಟ್ಟದಲ್ಲಿ ಲಘು ವಾಹನ ಚಾಲನಾ ತರಬೇತಿ
|
1) ಲಘು/ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು,
ಹಿಂದುಳಿದ ವರ್ಗಗಳ ಪ್ರವರ್ಗ-1/2ಎ/3ಎ/3ಬಿ ಗೆ ಸೇರಿರಬೇಕು.
|
2) ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
|
3) ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು.
|
4) ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಲಘು ವಾಹನ ಚಾಲನಾ ಪರವಾನಗಿ
ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು.
|
5) ಕೇಂದ್ರ ಮೋಟಾರು ವಾಹನ ನಿಯಮಾವಳಿಗಳು 1989 ನಿಯಮ 5 ರಂತೆ ವೈದ್ಯಕೀಯ ಪ್ರಮಾಣ
ಪತ್ರವನ್ನು ಹಾಜರುಪಡಿಸಬೇಕು.
|
6) ಕನಿಷ್ಠ 1 ತಿಂಗಳ ಅವಧಿಯ ತರಬೇತಿಯನ್ನು ತರಬೇತಿ ಕೇಂದ್ರಗಳು ನೀಡಬೇಕು.
|
7) ಸರ್ಕಾರದ ಆದೇಶ ಸಂಖ್ಯೆ: ಸಾಆ/ಪ್ರವರ್ತನ-3/ಪಿಆರ್-105/2013-14, ದಿನಾಂಕ: 27.09.2013 ರ ಅನ್ವಯ
ಈ ಕೆಳಗಿನಂತೆ ಗರಿಷ್ಠ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅ. ಆಟೋರಿಕ್ಷಾ - ರೂ.3000/-
ಆ. ಲಘು ಮೋಟಾರು ವಾಹನ - ರೂ.4000/-
ಇ. ಸಾರಿಗೆ ವಾಹನ - ರೂ.6000/-
|
8) ಪ್ರಾದೇಶಿಕ ಸಾರಿಗೆ ಕಛೇರಿಗಳಿಂದ ಅಂಗೀಕೃತವಾದ ಲಘು/ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಗಳ ಮೂಲಕ
ಮೇಲ್ಕಾಣಿಸಿದ ದರದ ಗರಿಷ್ಠ ಮಿತಿಗೆ ಒಳಪಟ್ಟು ಕರ್ನಾಟಕ ಪಾರದರ್ಶಕತೆ ಅಧಿನಿಯಮ 1999 ರನ್ವಯ ತರಬೇತಿ ಕಾರ್ಯ
ಕ್ರಮವನ್ನು ಅನುಷ್ಠಾನ ಮಾಡಲಾಗುವುದು.
|
9) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡುವುದು.
|
|
ಅ) ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ವಿಧಾನ:
|
1) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ತರಬೇತಿ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಿ,
ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕು.
|
2) ಆಯ್ಕೆ ಸಮಿತಿ -
|
1
|
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
|
ಅಧ್ಯಕ್ಷರು
|
2
|
ಪ್ರಾದೇಶಿಕ ಸಾರಿಗೆ ಅಧಿಕಾರಿ
|
ಸದಸ್ಯರು
|
3
|
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
|
ಸದಸ್ಯ ಕಾರ್ಯದರ್ಶಿ
|
|
3) ಅರ್ಹ ಅರ್ಜಿಗಳನ್ನು ಪರಿಶೀಲಿಸಿ, ಈ ಕೆಳಗಿನ ಮೀಸಲಾತಿ ಅನುಪಾತದ ಆಧಾರದಲ್ಲಿ ಪ್ರತಿ ಜಿಲ್ಲೆಗೆ ಗರಿಷ್ಠ
20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ನಿಯೋಜಿಸಬೇಕು.
|
ಕ್ರ. ಸಂ.
|
ಪ್ರವರ್ಗ
|
ಮೀಸಲಾತಿ ಅನುಪಾತ
|
1
|
1
|
15%
|
2
|
2ಎ
|
53%
|
3
|
3ಎ
|
15%
|
4
|
3ಬಿ
|
17%
|
|
ಒಟ್ಟು
|
100%
|
|
4) ಅಭ್ಯರ್ಥಿಯು ತರಬೇತಿಯನ್ನು ಮಧ್ಯದಲ್ಲೇ ಬಿಟ್ಟು ಹೋದಲ್ಲಿ ನಿಯಮಾನುಸಾರ ತರಬೇತಿ ವೆಚ್ಚವನ್ನು ಅಭ್ಯರ್ಥಿಗಳಿಂದ
ವಸೂಲಿ ಮಾಡತಕ್ಕದ್ದು.
|
|
ಆ) ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಅರ್ಹತೆ:
|
1) ಕೋರ್ಸ್ಗೆ ಸಂಬಂಧಿಸಿದಂತೆ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು.
|
2) 18-35 ವಯೋಮಿತಿಯಲ್ಲಿರಬೇಕು.
|
3) ಅಭ್ಯರ್ಥಿಗಳ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ.2.50 ಲಕ್ಷ ಹಾಗೂ
ಪ್ರವರ್ಗ 2ಎ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ.1.00 ಲಕ್ಷಗಳು.
|
4) ಅವಧಿ: ಗರಿಷ್ಠ 6 ತಿಂಗಳ ತರಬೇತಿ.
|
5) ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲಾಗುವುದು.
|
|