ಹಿಂದಿನ ಪುಟಕ್ಕೆ
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು:
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸುವ ಸಲುವಾಗಿ
ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ, ನಿರ್ವಹಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾ
-ಖೆಯಡಿ 1340 ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿದ್ದು, (1055 ಬಾಲಕರು ಹಾಗೂ 285 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ 54731
ಹಾಗೂ 15111 ಹೀಗೆ ಒಟ್ಟು 69842 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯದ ಉದ್ಯಾನವನ

ಪ್ರಾರ್ಥನಾನಿರತ ಮೆಟ್ರಿಕ್-ಪೂರ್ವ ವಿದ್ಯಾರ್ಥಿಗಳು

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1300/- ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ಪೂರೈಕೆ.
4.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.50/-ರಂತೆ 10 ತಿಂಗಳ ಅವಧಿಗೆ ಇತರೆ ವೆಚ್ಚ .
5.ಪ್ರತಿ ಬಾಲಕ ವಿದ್ಯಾರ್ಥಿಗೆ ರೂ.50/-ರಂತೆ 10 ತಿಂಗಳಿಗೆ ಕ್ಷೌರದ ವೆಚ್ಚ ನೀಡಿಕೆ.
6.ಪ್ರತಿ ವಿದ್ಯಾರ್ಥಿಗೆ ರೂ.200/-ರ ವೆಚ್ಚದಲ್ಲಿ ವರ್ಷಕ್ಕೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
7.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.500/- ರಂತೆ 10 ತಿಂಗಳ ಅವಧಿಗೆ ವೈದ್ಯಕೀಯ ವೆಚ್ಚ ನೀಡಿಕೆ.
8.ಪ್ರತಿ ವಿದ್ಯಾರ್ಥಿಗೆ 3 ವರ್ಷಕ್ಕೊಮ್ಮೆ ಹಾಸಿಗೆ ಹೊದಿಕೆ ಸರಬರಾಜು.
9.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ.600/-ರಂತೆ ಹಾಗೂ ಮಂಜೂರಾತಿ ಸಂಖ್ಯೆ
50ಕ್ಕಿಂತ ಹೆಚ್ಚಾಗಿ ಇರುವ ನಿಲಯಕ್ಕೆ ರೂ.1000/-ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸಲಾಗುತ್ತದೆ.
10.ಮೂವರು ಅಲ್ಪಕಾಲಿಕ ಬೋಧಕರನ್ನು ಮಾಹೆಯಾನ ರೂ.2000/-ರಂತೆ ಗೌರವಧನ ಕೊಡುವುದರೊಂದಿಗೆ
ಕಠಿಣ ವಿಷಯಗಳಲ್ಲಿ ಪಾಠ ಹೇಳಿಸುವುದು.
11.ಪ್ರತಿ ವಿದ್ಯಾರ್ಥಿನಿಲಯಕ್ಕೆ ವಾರ್ತಾ ಪತ್ರಿಕೆ ಮತ್ತು ನಿಯತಕಾಲಿಕೆ ಖರೀದಿಗಾಗಿ ವಾರ್ಷಿಕವಾಗಿ ರೂ.3000/-
12.ಶೌಚಾಲಯಗಳ ಸ್ವಚ್ಛತೆಗಾಗಿ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000/- ರಂತೆ 10 ತಿಂಗಳಿಗೆ.
ವಿದ್ಯಾರ್ಥಿನಿಲಯದಲ್ಲಿ ಮಾಸಿಕ ಆರೋಗ್ಯ ತಪಾಸಣೆ

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸರ್ಕಾರಿ / ಸರ್ಕಾರಿ ಅಂಗೀಕೃತ
ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು..
2.ಶೈಕ್ಷಣಿಕ ಸಂಸ್ಥೆಯಂದ 5 ಕಿ.ಮೀ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇಕಡಾ 90ರಷ್ಟು ಸ್ಥಾನಗಳನ್ನು
ಹಾಗೂ ಉಳಿದ 10ರಷ್ಟು ಸ್ಥಾನಗಳನ್ನು 5 ಕಿ.ಮೀ.ಗಳಿಗಿಂತ ಕಡಿಮೆ ದೂರದ ಸ್ಥಳಗಳ ವಿದ್ಯಾರ್ಥಿಗಳಿಗೆ
ನೀಡಲಾಗುವುದು.
3.ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿಯ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.44,500/-ಕ್ಕೆ ನಿಗದಿಪಡಿಸಿದೆ.
4.ಬೇಸಿಗೆ ರಜಾ ನಂತರ ಎಲ್ಲಾ ನಿಲಯಗಳನ್ನು ಜೂನ್ 1ರಂದು ತೆರೆಯಲಾಗುತ್ತದೆ.ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ನಿಲಯಾರ್ಥಿಗಳನ್ನು ಮಾತ್ರ ನವೀಕರಣ ವಿದ್ಯಾರ್ಥಿಗಳೆಂದು ಪರಿಗಣಿಸಿ ಆಯ್ಕೆ
ಸಮಿತಿಯ ಅನುಮೋದನೆಗೆ ಒಳಪಟ್ಟು ವಿದ್ಯಾರ್ಥಿಗಳನ್ನು ನವೀಕರಿಸಲಾಗುವುದು.
5.ನವೀಕರಣ ವಿದ್ಯಾರ್ಥಿಗಳ ಪ್ರವೇಶಾತಿಯ ಬಳಿಕ ಉಳಿದ ಸ್ಥಾನಗಳಿಗೆ ಆಯ್ಕೆ ಸಮಿತಿಯು ಆಯ್ಕೆ
ಮಾಡಿದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು.
6.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು.
1 ಪ್ರವರ್ಗ - 1 ಶೇಕಡ 10
2 ಪ್ರವರ್ಗ - 2ಎ ಶೇಕಡ 35
3 ಪ್ರವರ್ಗ - 2ಬಿ ಶೇಕಡ 09
4 ಪ್ರವರ್ಗ - 3ಎ ಶೇಕಡ 09
5 ಪ್ರವರ್ಗ - 3ಬಿ ಶೇಕಡ 12
6 ಪರಿಶಿಷ್ಟ ಜಾತಿ ಶೇಕಡ 21
7 ಪರಿಶಿಷ್ಟ ಪಂಗಡ ಶೇಕಡ 04
ಒಟ್ಟು ಶೇಕಡ 100

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1 ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರು
2 ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಸದಸ್ಯರು
3 ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರು ಸದಸ್ಯರು
4 ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರು
5 ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ) ಸದಸ್ಯರು
6 ಆಯಾ ತಾಲ್ಲೂಕಿನ ತಹಶೀಲ್ದಾರರು ಸದಸ್ಯರು
7 ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸದಸ್ಯರು
8 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ

ರಾಜ್ಯದಲ್ಲಿರುವ ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ. ಜಿಲ್ಲೆಯ ಹೆಸರು ವಿದ್ಯಾರ್ಥಿನಿಲಯಗಳ ಸಂಖ್ಯೆ ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕ ಬಾಲಕಿ ಒಟ್ಟು ಬಾಲಕ ಬಾಲಕಿ ಒಟ್ಟು
1 ಬಾಗಲಕೋಟೆ 36 7 43 2420 395 2815
2 ಬೆಂಗಳೂರು (ಗ್ರಾ) 17 4 21 760 150 910
3 ಬೆಂಗಳೂರು (ನ) 4 3 7 196 120 316
4 ಬೆಳಗಾಂ 88 12 100 4640 600 5240
5 ಬಳ್ಳಾರಿ 38 13 51 2705 820 3525
6 ಬೀದರ್ 43 8 51 2317 415 2732
7 ಚಾಮರಾಜನಗರ 11 2 13 485 95 580
8 ಚಿಕ್ಕಬಳ್ಳಾಪುರ 29 6 35 1515 300 1815
9 ಚಿಕ್ಕಮಗಳೂರು 42 19 61 1880 1250 3130
10 ಚಿತ್ರದುರ್ಗ 43 8 51 2045 505 2550
11 ದಕ್ಷಿಣ ಕನ್ನಡ 15 11 26 670 595 1265
12 ದಾವಣಗೆರೆ 30 10 40 1500 590 2090
13 ಧಾರವಾಡ 22 7 29 1080 290 1370
14 ಗದಗ್ 29 8 37 1623 460 2083
15 ಹಾಸನ 61 11 72 2985 575 3560
16 ಹಾವೇರಿ 38 9 47 1995 445 2440
17 ಕಲಬುರಗಿ 62 15 77 3315 760 4075
18 ಕೊಡಗು 15 5 20 560 245 805
19 ಕೋಲಾರ 24 8 32 1271 355 1626
20 ಕೊಪ್ಪಳ 34 8 42 2135 470 2605
21 ಮಂಡ್ಯ 49 16 65 2425 740 3165
22 ಮೈಸೂರು 41 6 47 1750 260 2010
23 ರಾಯಚೂರು 32 6 38 1820 320 2140
24 ರಾಮನಗರ 22 6 28 958 235 1193
25 ಶಿವಮೊಗ್ಗ 42 18 60 2150 1036 3186
26 ತುಮಕೂರು 48 11 59 2155 495 2650
27 ಉಡುಪಿ 11 6 17 470 280 750
28 ಉತ್ತರ ಕನ್ನಡ 44 20 64 2096 1170 3266
29 ವಿಜಯಪುರ 51 12 63 2935 625 3560
30 ಯಾದಗಿರಿ 34 10 44 1875 515 2390
ಒಟ್ಟು 1055 285 1340 54731 15111 69842

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ
1 ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕ ಜೂನ್ 1
2 ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕ ಮೇ 25
3 ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 15
4 ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕಡೆಯ ದಿನಾಂಕ ಜೂನ್ 20 ರಿಂದ 25
5 ಪ್ರವೇಶಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕ ಜೂನ್ 30