ಹಿಂದಿನ ಪುಟಕ್ಕೆ
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು:
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-53 ಮತ್ತು ಜಿಲ್ಲಾವಲಯ ಯೋಜನೆ ಹಾಗೂ ಯೋಜನೇತರ 2225-00-103-0-26)
(2016-17ನೇ ಸಾಲಿನ ಒಟ್ಟು ಆಯವ್ಯಯ ರಾಜ್ಯವಲಯ ರೂ.63871.96 ಲಕ್ಷಗಳು)

ಸರ್ಕಾರಿ / ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ,ಬಿ.ಇ,
ಎಂಬಿಬಿಎಸ್, ಡಿಪ್ಲೋಮ, ವೃತ್ತಿಶಿಕ್ಷಣ ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 1068
ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗಿದ್ದು, (442 ಬಾಲಕರು ಹಾಗೂ 626 ಬಾಲಕಿಯರು) ಇವುಗಳಲ್ಲಿ ಕ್ರಮವಾಗಿ
45763 ಹಾಗೂ 64852 ಹೀಗೆ ಒಟ್ಟು 110615 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.
1.ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.1400/-ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರದ ವೆಚ್ಚ ನೀಡಿಕೆ.
2.ಉಚಿತ ವಸತಿ ಸೌಕರ್ಯ.
3.ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.1000ರ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಸಾದಿಲ್ವಾರು ವೆಚ್ಚ ಭರಿಸುವುದು.
4.ಮಂಜೂರಾತಿ ಸಂಖ್ಯೆ 50 ಇರುವ ನಿಲಯಕ್ಕೆ ವರ್ಷಕ್ಕೆ ರೂ. 600 ಹಾಗೂ ಮಂಜೂರಾತಿ ಸಂಖ್ಯೆ 50ಕ್ಕಿಂತ ಹೆಚ್ಚು
ಇರುವ ನಿಲಯಕ್ಕೆ ರೂ. 1000ರಂತೆ ಪಾತ್ರೆಗಳಿಗೆ ಕಲಾಯಿ ವೆಚ್ಚ ಭರಿಸುವುದು.
5.ಶೌಚಾಲಯಗಳ ಸ್ವಚ್ಚತೆಗಾಗಿ ಪ್ರತಿ ನಿಲಯಕ್ಕೆ ವಾರ್ಷಿಕ ರೂ. 1250/- ವೆಚ್ಚ ಮಾಡಲಾಗುವುದು.
6.ಪ್ರತಿ ನಿಲಯಕ್ಕೆ 2 ದಿನ ಪತ್ರಿಕೆಗಳ ಪೂರೈಕೆಗಾಗಿ (ಒಂದು ಆಂಗ್ಲ ಭಾಷೆ ಹಾಗೂ ಒಂದು ಕನ್ನಡ ದಿನಪತ್ರಿಕೆಗಳು
ವಾಸ್ತವಿಕ ವೆಚ್ಚದಲ್ಲಿ.
7.ಕಟ್ಟಡಗಳ ಬಾಡಿಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ನಂತರ ಆಡಳಿತಾತ್ಮಕ ಅನುಮೋದನೆ ನೀಡಿದ
ದರದಲ್ಲಿ ಪಾವತಿಸುವುದು.
8. ಅ) ಸ್ನಾತಕೋತ್ತರ / ವೃತ್ತಿಪರ ವಿದ್ಯಾರ್ಥಿನಿಲಯಗಳ ಗ್ರಂಥಾಲಯಕ್ಕಾಗಿ ಪ್ರಥಮ ಬಾರಿಗೆ ರೂ.1.25 ಲಕ್ಷ,
ನಂತರದ ಪ್ರತಿ ವರ್ಷಕ್ಕೆ ರೂ.30,000/-
ಆ) ಇತರೆ ವಿದ್ಯಾರ್ಥಿನಿಲಯಗಳಿಗೆ ಪ್ರಥಮ ಬಾರಿಗೆ ರೂ.1.00 ಲಕ್ಷ, ನಂತರದ ಪ್ರತಿ ವರ್ಷಕ್ಕೆ ರೂ.20,000/-
9.ಕ್ರೀಡಾ ಸಾಮಗ್ರಿಗಳು ಪ್ರತಿ ವರ್ಷಕ್ಕೊಮ್ಮೆ, ಪ್ರತಿ ನಿಲಯಕ್ಕೆ, ಒಂದು ಸೆಟ್ ವಾಸ್ತವ ದರದಲ್ಲಿ.


ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು
1.ವಿದ್ಯಾರ್ಥಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5 ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳಿಗೆ
ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾರ್ಥಿಗಳು ಪ್ರವೇಶಕ್ಕೆ ಅನರ್ಹರು.
2.ಈ ವಸತಿನಿಲಯಗಳಿಗೆ ಪ್ರವೇಶ ಪಡೆಯಲು ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ
ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.1.00 ಲಕ್ಷ ಹಾಗೂ ಪ್ರವರ್ಗ-1, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ರೂ.2.50
ಲಕ್ಷ ನಿಗದಿಪಡಿಸಿದ್ದು, ಅರ್ಹತೆ ಮತ್ತು ಆದಾಯದ ಮಾನದಂಡದ ಮೇಲೆ ಆಯ್ಕೆ ಮಾಡಲಾಗುವುದು.
3.ವಿದ್ಯಾರ್ಥಿಗಳನ್ನು ಈ ಕೆಳಕಂಡ ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು.
1 ಪ್ರವರ್ಗ - 1 ಶೇಕಡ 10
2 ಪ್ರವರ್ಗ - 2ಎ ಶೇಕಡ 35
3 ಪ್ರವರ್ಗ - 2ಬಿ ಶೇಕಡ 09
4 ಪ್ರವರ್ಗ - 3ಎ ಶೇಕಡ 09
5 ಪ್ರವರ್ಗ - 3ಬಿ ಶೇಕಡ 12
6 ಪರಿಶಿಷ್ಟ ಜಾತಿ ಶೇಕಡ 21
7 ಪರಿಶಿಷ್ಟ ಪಂಗಡ ಶೇಕಡ 04
ಒಟ್ಟು ಶೇಕಡ 100
4.ಸರ್ಕಾರಿ ಸುತ್ತೋಲೆ ಸಂಖ್ಯೆ ಸಕಇ 53 ಬಿಎಂಸ್ 2009 ದಿ:26.2.2009ರಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಲಭ್ಯವಿರುವ ಖಾಲಿ ಸ್ಥಾನಗಳಲ್ಲಿ
ಶೇಕಡ 20ರಷ್ಟು ಸ್ಥಾನಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ವಿಧವೆಯರ ಮಕ್ಕಳು,ದೇವದಾಸಿಯರ
ಮಕ್ಕಳು, ಅಂಗವಿಕಲ ಮಕ್ಕಳು, ತಂದೆ ಹಾಗೂ ತಾಯಿ ಇಲ್ಲದ ಅನಾಥ ಮಕ್ಕಳು, ಪ್ರಮಾಣೀಕೃತ ಬಾಲಕಾರ್ಮಿಕರು, ಯೋಜನಾ ನಿರ್ವಸಿತ
ಪೋಷಕರ ಮಕ್ಕಳು, ದೌರ್ಜನ್ಯದಲ್ಲಿ ಮೃತಪಟ್ಟ / ಶಾಶ್ವತ ಅಂಗವಿಕಲ ಪೋಷಕರ ಮಕ್ಕಳು, ಅಪಘಾತದಲ್ಲಿ ಮೃತಪಟ್ಟ / ಶಾಶ್ವತ ಅಂಗವಿ
ಕಲರಾಗಿರುವ ಪೋಷಕರ ಮಕ್ಕಳು, ಆದಿವಾಸಿ ಪಂಗಡದ (ಜೇನು ಕುರುಬ ಹಾಗೂ ಕೊರಗ ಸಮಾಜ) ಮಕ್ಕಳು, ಅಲೆಮಾರಿ ಜನಾಂಗದ
ಮಕ್ಕಳು, ಭಿಕ್ಷುಕರ ಮಕ್ಕಳು, ಸಫಾಯಿ ಕರ್ಮಚಾರಿ ಮಕ್ಕಳಿಗೆ ಮೀಸಲಿರಿಸಲಾಗಿದೆ.

ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರಿ ಆದೇಶ ಸಂಖ್ಯೆ ಸಕಇ 221 ಬಿಎಂಎಸ್ 2009
ದಿನಾಂಕ:24.7.2009 ರಲ್ಲಿ ಕೆಳಕಂಡಂತೆ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
1 ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರು
2 ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಸದಸ್ಯರು
3 ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರು ಸದಸ್ಯರು
4 ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರು
5 ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ) ಸದಸ್ಯರು
6 ಆಯಾ ತಾಲ್ಲೂಕಿನ ತಹಶೀಲ್ದಾರರು ಸದಸ್ಯರು
7 ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸದಸ್ಯರು
8 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ

ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡುವ ವೇಳಾಪಟ್ಟಿ(ಸಾಮಾನ್ಯ ಮತ್ತು ಮಾದರಿ ವಿದ್ಯಾರ್ಥಿನಿಲಯಗಳು)
1 ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕ ಕಾಲೇಜು ಪ್ರಾರಂಭವಾಗುವ ದಿನಾಂಕದಿಂದ
2 ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕ 28.6.2016
3 ಹೊಸ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23.7.2016
4 ವಿದ್ಯಾರ್ಥಿ ಸಲ್ಲಿಸುವ ಅರ್ಜಿಯನ್ನು, ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ,
ದಾಖಲೆಗಳೊಂದಿಗೆ, ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ
25.7.2016
5 ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು, ಆಯ್ಕೆ ಸಮಿತಿಯು ಸಭೆ ಸೇರುವ ದಿನಾಂಕ 27.7.2016 ರಿಂದ 30.7.2016ರೊಳಗೆ
6 ಆಯ್ಕೆ ಸಮಿತಿಯ ಪಟ್ಟಿಯನ್ನು ಪ್ರಕಟಿಸುವ ದಿನಾಂಕ 31.7.2016
7 ಆಯ್ಕೆಯಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆಯುವ ಕೊನೆಯ ದಿನಾಂಕ 31.7.2016 ರಿಂದ 3.8.2016 ರೊಳಗೆ

ರಾಜ್ಯದಲ್ಲಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳ ಜಿಲ್ಲಾವಾರು ಮಾಹಿತಿ
ಕ್ರ.ಸಂ. ಜಿಲ್ಲೆಯ ಹೆಸರು ವಿದ್ಯಾರ್ಥಿನಿಲಯಗಳ ಸಂಖ್ಯೆ ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ
ಬಾಲಕ ಬಾಲಕಿ ಒಟ್ಟು ಬಾಲಕ ಬಾಲಕಿ ಒಟ್ಟು
1 ಬಾಗಲಕೋಟೆ 18 21 39 1835 2300 4315
2 ಬೆಂಗಳೂರು (ಗ್ರಾ) 3 6 9 300 600 900
3 ಬೆಂಗಳೂರು (ನ) 19 23 42 1800 2520 4050
4 ಬೆಳಗಾಂ 25 30 55 2575 3125 5700
5 ಬಳ್ಳಾರಿ 29 18 47 3000 1825 4825
6 ಬೀದರ್ 12 15 27 1375 1565 2940
7 ಚಾಮರಾಜನಗರ 6 15 21 615 1525 2140
8 ಚಿಕ್ಕಬಳ್ಳಾಪುರ 8 16 24 800 1700 2500
9 ಚಿಕ್ಕಮಗಳೂರು 11 28 39 1175 2960 4135
10 ಚಿತ್ರದುರ್ಗ 19 24 43 1965 2400 4365
11 ದಕ್ಷಿಣ ಕನ್ನಡ 15 32 47 1470 3300 4770
12 ದಾವಣಗೆರೆ 19 24 43 1965 2400 4365
13 ಧಾರವಾಡ 14 22 36 1425 2250 3675
14 ಗದಗ್ 8 17 25 800 1800 2600
15 ಹಾಸನ 19 23 42 2025 2400 4425
16 ಹಾವೇರಿ 9 19 28 1015 2040 3055
17 ಕಲಬುರಗಿ 20 29 49 2100 2950 5050
18 ಕೊಡಗು 8 11 19 800 1100 1900
19 ಕೋಲಾರ 14 16 30 1400 1650 3050
20 ಕೊಪ್ಪಳ 9 17 26 985 1765 2750
21 ಮಂಡ್ಯ 20 21 41 2125 2225 4350
22 ಮೈಸೂರು 24 21 45 2573 2160 4733
23 ರಾಯಚೂರು 13 19 32 1375 1950 3325
24 ರಾಮನಗರ 10 10 20 1050 1025 2075
25 ಶಿವಮೊಗ್ಗ 29 43 72 3000 4570 7570
26 ತುಮಕೂರು 18 29 47 1950 3012 4962
27 ಉಡುಪಿ 9 15 24 900 1615 2515
28 ಉತ್ತರ ಕನ್ನಡ 12 21 33 1230 2125 3355
29 ವಿಜಯಪುರ 13 24 37 1300 2450 3750
30 ಯಾದಗಿರಿ 9 12 21 1000 1200 2200
ಒಟ್ಟು 442 626 1068 45763 64852 110615