ಶಾಖೆಗಳು
ಸಂಸ್ಥೆಯ ಬಗ್ಗೆ
ಮಂಜೂರಾದ ಹುದ್ದೆಗಳು
ಕಾರ್ಯಕ್ರಮಗಳು
ಆಯವ್ಯಯ
ಕ್ರಿಯಾ ಯೋಜನೆ
ಆರ್.ಟಿ.ಐ

 

ಕರ್ನಾಟಕ ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ತನ್ನ ಆದೇಶ ಸಂಖ್ಯೆ: ಸಕಇ/28/ಬಿಸಿಎ/90/ದಿನಾಂಕ: 31-8-1992 ರಂತೆ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿರುತ್ತದೆ.  ಈ ಸಂಸ್ಥೆಯು ದಿನಾಂಕ: 20-8-1993 ರಿಂದ ಕಾರ್ಯ ನಿರ್ವಹಿಸುತ್ತಿದೆ.  ಹಿಂದುಳಿದ ವರ್ಗಗಳ ಅಧ್ಯಯನ, ಈ ವರ್ಗಗಳಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಪ್ಲಾನ್ ಮಾನಿಟರಿಂಗ್, ಸಿಂಪೋಸಿಯಂ, ವರ್ಕಷಾಪ್, ಸಮೀಕ್ಷೆ ಹಾಗೂ ಮೌಲ್ಯಮಾಪನ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳ ತುಲನಾತ್ಮಕ ಅಧ್ಯಯನ ನಡೆಸುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಎಸ್ ಡಬ್ಲ್ಯೂಡಿ/20/ಬಿಸಿಎ/90/ದಿನಾಂಕ:  4-8-1993ರ ಪ್ರಕಾರ ಕಾರ್ಯಕ್ರಮಗಳನ್ನು ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರ ಸಲಹೆ/ಸಹಕಾರದೊಂದಿಗೆ ಜಾರಿಗೊಳಿಸುತ್ತಿದ್ದು, 2013-14 ನೇ ಸಾಲಿನಲ್ಲಿ ದಿನಾಂಕ: 04-08-1993ರ ಆದೇಶವನ್ನು ಮಾರ್ಪಡಿಸಲಾಗಿದ್ದು, ಪ್ರಸಕ್ತ ಸಾಲಿನಿಂದ ಸರ್ಕಾರಿ ಆದೇಶ ಸಂಖ್ಯೆ: ಹಿಂವಕ 106 ಬಿಸಿಎ 2013 ದಿನಾಂಕ: 17-04-2013 ರನ್ವಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.  ಪ್ರತಿ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲೆಕ್ಕ ಶೀರ್ಷಿಕೆ: 2225-03-277-2-08 ರಡಿಯ ಆಯವ್ಯಯದಲ್ಲಿ 2005-06 ರಿಂದ ಹಣಕಾಸಿನ ವ್ಯವಸ್ಥೆ ಒದಗಿಸಲಾಗುತ್ತಿದೆ.  ದಿನಾಂಕ: 05-10-2013ರ ಸರ್ಕಾರಿ ಆದೇಶ ಸಂಖ್ಯೆ: ಹಿಂವಕ 107 ಬಿಸಿಎ 2103 ರಲ್ಲಿ ಸಂಸ್ಥೆಯ ನಿರ್ದೇಶಕರನ್ನು ಇಲಾಖಾ ಮುಖ್ಯಸ್ಥರೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.

 

ಉಪಯುಕ್ತ ಕೊಂಡಿಗಳು
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಮಾಜ ಕಲ್ಯಾಣ ಇಲಾಖೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಎನ್.ಸಿ.ಬಿ.ಸಿ-ಕೇಂದ್ರ ಸರ್ಕಾರ

Social Justice and Empowerment

 

ಈ ವೆಬ್ ಸೈಟ್ ವಿನ್ಯಾಸ ಮತ್ತು ಅಳವಡಿಕೆ ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ
ಈ ವೆಬ್ ಸೈಟ್ ಒಳಾಂಶಗಳ ಮಾಹಿತಿಯ ಹಕ್ಕು, ಅಳವಡಿಕೆ, ನಿರ್ವಹಣೆ ಮತ್ತು ಸರಿಪಡಿಸುವ ಜವಾಬ್ದಾರಿ:- ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ