ದಿನಾಂಕ: 1.1.2019 ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ಅಂತಿಮ ಪದಕ್ರಮ ಪಟ್ಟಿಗಳು. 2018-19ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2019 ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.07.2019, ಸಮಯ 5.00 PM. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರಡು ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು-2019 2019-20 ನೇ ಸಾಲಿಗೆ ಐ.ಎ.ಎಸ್, ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಾಗಿ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕClosed. 2019-20-ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ಸಾಮಾನ್ಯ, ಮಾದರಿ, ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಅಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Closed 2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ನೀಡಲಾಗಿರುವ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ (ಕ್ರಮ: ಇಲಾಖೆಯ ಸಿಬ್ಬಂದಿ ಮಾತ್ರ). ದಿನಾಂಕ: 1.1.2019ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ತಾತ್ಕಾಲಿಕ ಪದಕ್ರಮ ಪಟ್ಟಿಗಳು. ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್ ಕನ್ನಡ | English
ಹಿಂದಿನ ಪುಟಕ್ಕೆ
2018-19 ನೇ ಸಾಲಿನಲ್ಲಿ-ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ಅರ್ಜಿ ಆಹ್ವಾನ.
ಪ್ರಕಟಣೆ
ಪೂರ್ಣಾವಧಿ ಪಿಎಚ್.ಡಿ. ಫೆಲೋಶಿಪ್ ಪಡೆಯಲು ಸಂಸ್ಥೆ/ಕಾಲೇಜು/ವಿಶ್ವವಿದ್ಯಾಲಯಗಳಿಂದ ನೀಡಬೇಕಾದ ದೃಢೀಕರಣ(ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳಿಗೆ).
ಪೂರ್ಣಾವಧಿ ಪಿಎಚ್.ಡಿ. ಫೆಲೋಶಿಪ್ ಪಡೆಯಲು ಸಂಸ್ಥೆ/ಕಾಲೇಜು/ವಿಶ್ವವಿದ್ಯಾಲಯಗಳಿಂದ ಸಲ್ಲಿಸ ಬೇಕಾದ ಪ್ರಗತಿ ವರದಿಯ ನಮೂನೆ(ನವೀಕರಣ ವಿದ್ಯಾರ್ಥಿಗಳಿಗೆ ಮಾತ್ರ).
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸೂಚನೆಗಳು
Affidavit
Mandate Form(ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳಿಗೆ)
ಅರ್ಜಿಸಲ್ಲಿಸಲು ಕೊನೆಯ ದಿನಾಂಕ 10-12-2018 5PM ರ ವರೆಗೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯವನ್ನು ಪಡೆಯಲು ಅವಕಾಶವಿರುವುದಿಲ್ಲ

1.ಮಾನವಿಕ ವಿಷಯಗಳು, ಭಾಷೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳು, ವಾಣಿಜ್ಯ ಮತ್ತು ನಿರ್ವಹಣೆ, ತಾಂತ್ರಿಕ ಹಾಗೂ ವೈದ್ಯಕೀಯ ವಿಜ್ಞಾನಗಳಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾಸಿಕ ರೂ.10,000/- ದಂತೆ ವ್ಯಾಸಂಗ ವೇತನ/ಫೆಲೋಶಿಪ್ಅನ್ನು ನೀಡಲಾಗುವುದು.

2.ನಿಗದಿಪಡಿಸಿರುವ ಅರ್ಹತೆಗಳು:

     ಅ. ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
     ಆ. ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ  ಪ್ರವರ್ಗ-1, 2ಎ,3ಎ ಅಥವಾ 3ಬಿ ಗೆ ಸೇರಿರಬೇಕು.
     ಇ. ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪೂರ್ಣಾವಧಿ (Full Time) ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
     ಈ. ಸೌಲಭ್ಯವನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಯು ಭಾರತ ಸರ್ಕಾರ /ಕರ್ನಾಟಕ ಸರ್ಕಾರ/ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗೆ ಆಯ್ಕೆಯಾಗಿರಬಾರದು.
     ಉ. ಶೈಕ್ಷಣಿಕ ಅರ್ಹತೆಗಳು:
            • ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
            • ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಗಳಲ್ಲಿನ ಸಂಶೋಧನಾ ಮಾರ್ಗದರ್ಶಕರಡಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿಕೊಂಡಿರಬೇಕು.
     ಊ. ವಯೋಮಿತಿ:
           • ಅಭ್ಯರ್ಥಿಯ ಗರಿಷ್ಠ ವಯೋಮಿತಿ 35 ವರ್ಷಗಳು.
     ಋ. ವಿದ್ಯಾರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ:
       a) ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ನಿಗದಿಪಡಿಸಿರುವ ಆದಾಯಮಿತಿ.
          • ಪ್ರವರ್ಗ-1 - ರೂ.4.50 ಲಕ್ಷ.
          • ಪ್ರವರ್ಗ-2(ಎ), 3(ಎ), 3(ಬಿ) ಮತ್ತು Other OBC - ರೂ.3.50 ಲಕ್ಷ.
      
     ಎ. ಕೇಂದ್ರ / ರಾಜ್ಯ ಸರ್ಕಾರಿ / ಅನುದಾನಿತ ಸಂಸ್ಥೆ / ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ.
     ಏ. ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
     ಐ. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಪಿಎಚ್.ಡಿ ಅಧ್ಯಯನಕ್ಕಾಗಿ ಈ ಸೌಲಭ್ಯವನ್ನು ನೀಡಲಾಗುವುದು.

3.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ:

    I. ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು ಆನ್-ಲೈನ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದು.
    II. ಆನ್-ಲೈನ್ ಅರ್ಜಿಯೊಂದಿಗೆ PDF Format ನಲ್ಲಿ ಸ್ಕ್ಯಾನ್ ಮಾಡಿ ಸಲ್ಲಿಸಬೇಕಾದ ದಾಖಲೆಗಳು. (ಪ್ರತಿ ದಾಖಲೆಯು ಗರಿಷ್ಠ 300KB ಇರಬೇಕು).
          • ಎಸ್.ಎಸ್.ಎಲ್.ಸಿ./10ನೇ ತರಗತಿ ಅಂಕಪಟ್ಟಿ.
          • ಜಾತಿ ಮತ್ತು ಆದಾಯ ದೃಢೀಕರಣ ಪತ್ರ (ತಹಶೀಲ್ದಾರರಿಂದ ಪಡೆದಿರಬೇಕು)
          • ವಾಸಸ್ಥಳ ದೃಢೀಕರಣ ಪತ್ರ (ತಹಶೀಲ್ದಾರರಿಂದ ಪಡೆದಿರಬೇಕು) 
          • ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು.
          • ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ (Convocation Certificate).
          • ಪಿಎಚ್.ಡಿ. ನೋಂದಣಿ ಪ್ರಮಾಣ ಪತ್ರ.
          • ಪಿಎಚ್.ಡಿ. ನೋಂದಣಿ ಶುಲ್ಕ ಪಾವತಿ ರಶೀದಿ.
          • ನವೀಕರಣ ವಿದ್ಯಾರ್ಥಿಯಾಗಿದ್ದಲ್ಲಿ ಹಿಂದಿನ ವರ್ಷದ ಕೋರ್ಸ ಮುಗಿದಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ದೃಢೀಕರಣ.
          • ಇತರೆ ಯಾವುದೇ ಮೂಲಗಳಿಂದ ವ್ಯಾಸಂಗ ವೇತನಕ್ಕೆ ಆಯ್ಕೆಯಾಗದಿರುವ ಬಗ್ಗೆ ಶಿಕ್ಷಣ ಸಂಸ್ಥೆ/ಕಾಲೇಜು/ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಯಿಂದ ನಿಗದಿತ ನಮೂನೆಯಲ್ಲಿ ದೃಢೀಕರಣ ಪತ್ರ.
             ಇದಕ್ಕೆ ಸಂಬಂಧಿಸಿದ ನಮೂನೆಯನ್ನು ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿ ಸಂಬಂಧಿಸಿದವರಿಂದ ದೃಢೀಕರಿಸಿ ಅಪ್ಲೋಡ್ ಮಾಡುವುದು.
          • ಆಧಾರ್ ಕಾರ್ಡ್ ಪ್ರತಿ.
          • ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಅದರ ಕೆಳಗೆ ವಿದ್ಯಾರ್ಥಿಯ ಸಹಿ ಬರುವಂತೆ ಸ್ಕ್ಯಾನ್ ಮಾಡಿ JPG Format (30KB ಇರಬೇಕು) ನಲ್ಲಿ ಅಪ್ಲೋಡ್ ಮಾಡಬೇಕು.
          • ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟ (ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಶಾಖೆ ಮತ್ತು IFSC ಕೋಡ್, MICR ಕೋಡ್ ಮಾಹಿತಿ) ವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
          • ಆನ್-ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಪ್ರತಿ ಹಾಗೂ ಅಪ್ಲೋಡ್ ಮಾಡಿರುವ ಎಲ್ಲಾ ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಸಂಸ್ಥೆ/ಕಾಲೇಜು/ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಂದ ದೃಢೀಕರಿಸಿ ಆಯಾ ಸಂಸ್ಥೆ/ಕಾಲೇಜು/ವಿಶ್ವವಿದ್ಯಾಲಯಗಳಿರುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳುವುದು.
          • ನಿಗದಿತ ದಿನಾಂಕದ ನಂತರ ಬರುವ ಯಾವುದೇ ಮನವಿ/ಆಫ್ ಲೈನ್ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
          • ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್-ಲೋಡ್ ಮಾಡಿರುವ ದಾಖಲೆಗಳೊಂದಿಗೆ ತಾಳೆ ಮಾಡಿ ಪರಿಶೀಲಿಸಿ ಮಾಹಿತಿಯನ್ನು ಆನ್ಲೈನ್ ಮೂಲಕ ಅಪ್ಡೇಟ್ ಮಾಡುವುದು
          • ವಿದ್ಯಾರ್ಥಿ ಗಳಿಸಿದ ಅಂಕಗಳು, ಪ್ರವರ್ಗವಾರು ಮೀಸಲಾತಿ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ನೀಡಲಾಗುವುದು.

     III. ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ ಯಲ್ಲಿ 10 ನೇ ತರಗತಿಯನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳ ಮಾಹಿತಿಯು online ಅರ್ಜಿಯಲ್ಲಿ ಲಭ್ಯವಿಲ್ಲದೆ ಇದ್ದಲ್ಲಿ (ಆನ್-ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ) ನಿಮ್ಮ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಹೋಗಿ ಎಸ್.ಎಸ್.ಎಲ್.ಸಿ. ರಿಜಿಸ್ಟರ್ ನಂಬರ್, ಜನ್ಮ ದಿನಾಂಕ, ತಂದೆಯ ಮತ್ತು  ತಾಯಿಯ ಹೆಸರು, ವಿಶೇಷಚೇತನ ಅಭ್ಯರ್ಥಿಯ ಮಾಹಿತಿ ಹಾಗೂ ಶಾಲೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಿಕೊಂಡು ನಂತರ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು.

     IV. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ವಿಳಾಸವು ಇಲಾಖಾ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.

4. ಎಲ್ಲಾ ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 11.12.2018, ಸಂಜೆ 5.00 ಗಂಟೆ.
I Accept that I have gone through all the instructions
Online Application
ಸಹಾಯವಾಣಿ ಸಂಖ್ಯೆ : 8050770004
ಇ-ಮೇಲ್ ವಿಳಾಸ : bcwd.training@karnataka.gov.in
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯ: ಬೆಳಿಗ್ಗೆ:10.30 ರಿಂದ ಸಂಜೆ:5.30 ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8050770004