ಹಿಂದಿನ ಪುಟಕ್ಕೆ
ಕುಡಿಯುವ ನೀರು:
ಕುಡಿಯುವ ನೀರು
ಯೋಜನೆಯ ಉದ್ದೇಶ:
ಅಲೆಮಾರಿ / ಅರೆ ಅಲೆಮಾರಿ ಜನಾಂಗದವರು ಒಂದು ಕಡೆ ನೆಲೆ ನಿಲ್ಲಲು ಅನುಕೂಲವಾಗುವಂತೆ ನಿವೇಶನವನ್ನು ಒದಗಿಸಲು ಜಮೀನು ಖರೀದಿಸಿದ / ಸರ್ಕಾರದಿಂದ ಉಚಿತವಾಗಿ ಪಡೆದ ಸ್ಥಳಗಳಲ್ಲಿ ಕುಡಿಯುವ ನೀರಿದ ಸೌಲಭ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ನಿಬಂಧನೆಗಳು:
1 ರಾಜೀವ ಗಾಂಧಿ ಗ್ರಾಮೀಣ ವಸತಿನಿಗಮದಿಂದ ಬಡಾವಣೆ ನಿರ್ಮಾಣ ಹಾಗೂ ವಸತಿ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಂಡ ಬಳಿಕ ಕುಡಿಯುವ ನೀರಿನ ಪ್ರಸ್ತಾವನೆಯನ್ನು ಅಂದಾಜುಪಟ್ಟಿಯೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು,ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸತಕ್ಕದ್ದು.
2 ಕರ್ನಾಟಕ ಅಲೆಮಾರಿ / ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
3 ಜಿಲ್ಲಾಧಿಕಾರಿಗಳ ಹಂತದಲ್ಲೇ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿ, ಅನುಷ್ಠನ ಮಾಡುವ ಸಂಸ್ಥೆಗಳನ್ನು ಗುರುತಿಸಿ, ಕಾಮಗಾರಿಯನ್ನು ಅನುಷ್ಠಾನ ಮಾಡುವುದು.