ಹಿಂದಿನ ಪುಟಕ್ಕೆ
ವಸತಿ ಯೋಜನೆ:
ವಸತಿ ಯೋಜನೆ
ಯೋಜನೆಯ ಉದ್ದೇಶ ಮತ್ತು ಘಟಕ ವೆಚ್ಚದ ವಿವರ:
ಅಲೆಮಾರಿ / ಅರೆ ಅಲೆಮಾರಿ ಜನಾಂಗದ ವಸತಿರಹಿತರಿಗೆ ಅತಿ ಅಗತ್ಯ ಮೂಲಭೂತ ಸೌಕರ್ಯವಾದ ವಸತಿ ಸೌಲಭ್ಯವನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ನಿರ್ದಿಷ್ಠ ನೆಲೆ ಇಲ್ಲದೆ ಒಂದು ಪ್ರದೇಶದಿಮದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಕಾರಣ,ಶೈಕ್ಷಣಿಕ ಮತ್ತು ಆರ್ಥಿಕವಾಗಿ ಈ ಜನಾಂಗವು ಅತ್ಯಂತ ಹಿಂದುಳಿದಿದೆ. ವಸತಿ ಸೌಲಭ್ಯವನ್ನು ಕಲ್ಪಿಸಿ,ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
ವಸತಿ ಯೋಜನೆಯ ಅನುಷ್ಠಾನ:
ಈ ಯೋಜನೆಯನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅನುಷ್ಠಾನ ಮಾಡುವುದು.
ಘಟಕ ವೆಚ್ಚ:
ಸರ್ಕಾರದ ಇತರೆ ವಸತಿ ಯೋಜನೆಗಳ ಘಟಕ ವೆಚ್ಚವು ಅಲೆಮಾರಿ / ಅರೆ ಅಲೆಮಾರಿ ಜನಾಂಗಗಳಿಗೂ ಅನ್ವಯವಾಗುತ್ತದೆ.
ನಿಬಂಧನೆಗಳು:
1 ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಆದೇಶ ಸಂ.ಪಿ.ಹೆಚ್.ಎಸ್. 262 ಎಸ್.ಇ.ಡಬ್ಲ್ಯೂ. 65, ದಿನಾಂಕ:01-02-1966 ರಲ್ಲಿ ನಮೂದಿಸಿರುವ ಅಲೆಮಾರಿ / ಅರೆ ಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡುವುದು
2 ಫಲಾನುಭವಿಯು ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ವಸತಿ ಸೌಲಭ್ಯವನ್ನು ಪಡೆದಿರಬಾರದು.
3 ಕನಿಷ್ಠ 20 ವರ್ಷದವರೆಗೆ ಈ ನಿವೇಶನವನ್ನು ಪರಭಾರೆ ಪಡೆತಕ್ಕದ್ದಲ್ಲ. ಈ ಅವಧಿಯಲ್ಲಿ ಪರಭಾರೆ ಮಾಡಿದ್ದಲ್ಲಿ, ಮಾರಾಟ ಮಾಡುವಾಗ ಇದ್ದ ಮಾರುಕಟ್ಟೆ ಬೆಲೆಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು.
4 ನಿವೇಶನವು ಕುಟುಂಬದ ಮಹಿಳೆಯ ಹೆಸರಿನಲ್ಲಿ ಆಗಿರಬೇಕು.
5 ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನವಾಗುವ ಎಲ್ಲಾ ವಸತಿ ಯೋಜನೆಗಳ ನಿಯಮಗಳು ಈ ಯೋಜನೆಗೂ ಅನ್ವಯವಾಗುತ್ತದೆ.
6 ಕುಟುಂಬದ ಒಟ್ಟು ವಾರ್ಷಿಕ ವರಮಾನ ರೂ.2.00 ಲಕ್ಷದ ಮಿತಿಯೊಳಗೆ ಇರಬೇಕು.