ಹಿಂದಿನ ಪುಟಕ್ಕೆ
ಸಮುದಾಯ ಭವನಗಳ ನಿರ್ಮಾಣ:
ಸಮುದಾಯ ಭವನಗಳ ನಿರ್ಮಾಣ
ಯೋಜನೆಯ ಉದ್ದೇಶ ಮತ್ತು ಘಟಕ ವೆಚ್ಚದ ವಿವರ:
ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಒಗ್ಗೂಡುವ ದೃಷ್ಠಿಯಿಂದ ಸಮುದಾಯ ಭವನಗಳನ್ನು ನಿರ್ಮಾಣ ಮಾಡಬೇಕಾಗಿದ್ದು, ಸಮುದಾಯ ಭವನಗಳ ಘಟಕ ವೆಚ್ಚವನ್ನು ರೂ.10.00 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ನಿಬಂಧನೆಗಳು:
1 ಸಮುದಾಯ ಭವನ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸತಕ್ಕದ್ದು.
2 ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು.
3 ಅಲೆಮಾರಿ / ಅರೆ ಅಲೆಮಾರಿ ಕಾಲೋನಿಗಳಲ್ಲಿ ನಿರ್ಮಾಣ ಮಾಡಲಾಗುವ ಸಮುದಾಯ ಭವನಗಳ ಘಟಕ ವೆಚ್ಚ ರೂ.10.00 ಲಕ್ಷವನ್ನು ಸಂಪೂರ್ಣವಾಗಿ ಅಲೆಮಾರಿ / ಅರೆ ಅಲೆಮಾರಿ ಅಭಿವೃದಧಿ ಯೋಜನೆಯಡಿಯಲ್ಲಿಯೇ ಭರಿಸತಕ್ಕದ್ದು.
4 ಜಿಲ್ಲಾಧಿಕಾರಿಗಳ ಹಂತದಲ್ಲಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಅನುಷ್ಠಾನ ಮಾಡುವ ಸಂಸ್ಥೆಗಳನ್ನು ಗುರುತಿಸಿ, ಕಾಮಗಾರಿಯನ್ನು ಅನುಷ್ಠಾನ ಮಾಡತಕ್ಕದ್ದು.
5 ಸಮುದಾಯ ಭವನಗಳ ಪ್ರಗತಿಯ ಹಂತಗಳನ್ನು ಆಧರಿಸಿ, 40:40:20 ರ ಅನುಪಾತದಂತೆ ಲಭ್ಯತೆಗೆ ಒಳಪಟ್ಟು ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವುದು.
6 2ನೇ ಮತ್ತು 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಪೂರ್ವದಲ್ಲಿ ಕಟ್ಟಡದ ಪ್ರಗತಿಯ ಛಾಯಚಿತ್ರ ಮತ್ತು ಧನ ವಿನಿಯೋಗ ಪ್ರಮಾಣ ಪತ್ರವನ್ನು ಸಂಬಂಧಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಸಲ್ಲಿಸತಕ್ಕದ್ದು.
7 ಸರ್ಕಾರದ ಅನುದಾನದಿಂದ ನಿರ್ಮಿತವಾದ ಸಮುದಾಯ ಭವನಗಳನ್ನು ರಾಜಕೀಯ ಚಟುವಟಿಕೆಗಳಿಗೆ ಉಪಯೋಗಿಸಬಾರದು.
8 ಸರ್ಕಾರದ ಅನುದಾನದಿಂದ ನಿರ್ಮಿತವಾದ ಸಮುದಾಯ ಭವನಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಇತರ ಸಮುದಾಯದವರಿಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆಯ ಮೇರೆಗೆ ರಿಯಾಯಿತಿ ದರದಲ್ಲಿ ನೀಡತಕ್ಕದ್ದು.
9 ಈ ಕಟ್ಟಡದ ಮುಂಭಾಗದಲ್ಲಿ ಸಂಘದ/ಜನ ಪ್ರತಿನಿಧಿಗಳ ಹೆಸರನ್ನು ಹಾಕುವುದರ ಜೊತೆಗೆ, “ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಧನದೊಂದಿಗೆ ನಿರ್ಮಾಣ” ಎಂಬ ನಾಮಫಲಕ ಹಾಕತಕ್ಕದ್ದು.
ಅನುದಾನ ಹಂಚಿಕೆ ಹಾಗೂ ಮಂಜೂರಾತಿ ವಿಧಾನ:
1 ಆಯಾ ವರ್ಷ, ಮೆಟ್ರಿಕ್ ಪೂರ್ವ ವಿಶೇಷ ಪ್ರೋತ್ಸಾಹಧನ ಮಂಜೂರಾತಿಗಾಗಿ ಅಗತ್ಯವಿರುವ ಅನುದಾನದ ಬಗ್ಗೆ ಪ್ರತಿ ಜಿಲ್ಲೆಯಿಂದ ಬೇಡಿಕೆಯನ್ನು ಪಡೆದು, ಅನುದಾನ ಹಂಚಿಕೆ ಮಾಡಲಾಗುವುದು.
2 ಅರ್ಹ ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳೆಲ್ಲರಿಗೂ ವಿದ್ಯಾರ್ಥಿವೇತನವನ್ನು ನೀಡಲು ಅನುದಾನ ಲಭ್ಯವಿರುವ ಕಾರಣ, ಅಗತ್ಯವಿರುವ ಅನುದಾನದ ಬೇಡಿಕೆಯನ್ನು ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರಿಗೆ ನೀಡತಕ್ಕದ್ದು.
3 ರಾಜ್ಯವಲಯದಿಂದ ಜಿಲ್ಲಾ ಪಂಚಾಯತ್ ಗೆ ಬಿಡುಗಡೆ ಮಾಡುವ ಅನುದಾನವನ್ನು ಬೇಡಿಕೆಯನ್ನಾಧರಿಸಿ, ಸಂಬಂಧಪಟ್ಟ ತಾಲ್ಲೂಕಿಗೆ ಜಿಲ್ಲಾ ಮಟ್ಟದಲ್ಲಿ ಮರು ಬಿಡುಗಡೆ ಮಾಡತಕ್ಕದ್ದು.
4 ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಳ ವಿಸ್ತರಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.
5 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ, ಹಾಜರಾತಿಯ ಆಧಾರದ ಮೇಲೆ, ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ವಿದ್ಯಾರ್ಥಿವೇತನವನ್ನು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮಂಜೂರು ಮಾಡತಕ್ಕದ್ದು.