ಹಿಂದಿನ ಪುಟಕ್ಕೆ
ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶವಕಾಶ ಸೌಲಭ್ಯ:
ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶವಕಾಶ ಸೌಲಭ್ಯ
ಸರ್ಕಾರದ ಆದೇಶ ಸಂಖ್ಯೆ:ಹಿಂವಕ 424 ಬಿಎಂಎಸ್ 2013 ದಿನಾಂಕ:17-7-2013 ರನ್ವಯ ಈ ಕೆಳಗಿನ ಪ್ರತಿಷ್ಠಿತ ಶಾಲೆಗಳಲ್ಲಿ ನಿಬಂಧನೆಗಳಿಗೊಳಪಟ್ಟು, ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರವೇಶವಕಾಶವನ್ನು ಕಲ್ಪಿಸಲಾಗಿದೆ.
ಷರತ್ತುಗಳು:
1 ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಅಲೆಮಾರಿ / ಅರೆ ಅಲೆಮಾರಿ ಜಾತಿಗಳಿಗೆ ಸೇರಿರತಕ್ಕದ್ದು.(ಸರ್ಕಾರದ ಆದೇಶ ಸಂ.ಪಿ.ಹೆಚ್.ಎಸ್. 262 ಎಸ್.ಇ.ಡಬ್ಲ್ಯೂ 65, ಬೆಂಗಳೂರು, ದಿನಾಂಕ:01-02-1966 ರಲ್ಲಿ ಇರುವಂತೆ)
2 ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2.00 ಲಕ್ಷದೊಳಗಿರಬೇಕು.
ಪ್ರತಿಷ್ಠಿತ ಶಾಲೆಯನ್ನು ಗುರುತಿಸುವ ವಿಧಾನ:
1 ಆ ಶಾಲೆ ಕನ್ನಡ / ಆಂಗ್ಲ ಮಾಧ್ಯಮದ್ದಾಗಿರಬೇಕು.
2 ವಸತಿ ಸೌಕರ್ಯ ಇರುವ ಶಾಲೆಗಳಿಗೆ ಆದ್ಯತೆ ನೀಡಬೇಕು.
3 ಆ ಶಾಲೆಯಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನಿಷ್ಠ ಶೇ.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರಬೇಕು.
4 ಆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಇರಬೇಕು.
5 ವಸತಿ ಶಾಲೆಯಲ್ಲಿ ಸೂಕ್ತ ವಸತಿ, ಭೋಜನಾ, ಸಮವಸ್ತ್ರ, ಪಠ್ಯ-ಪುಸ್ತಕ, ಪ್ರವಾಸ, ಹಾಗೂ ಇತರೆ ಸೌಲಭ್ಯಗಳನ್ನು, ಇತರೆ ವಿದ್ಯಾರ್ಥಿಗಳಿಗೆ ಒದಗಿಸುವಂತೆ, ಈ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೂ ಸಹ ಒದಗಿಸಬೇಕು.
6 ವಿದ್ಯಾರ್ಥಿಗಳಿಂದ ಅಥವಾ ಅವರ ತಂದೆ/ತಾಯಿ/ಪೋಷಕರಿಂದ ಹೆಚ್ಚುವರಿ ಶುಲ್ಕಗಳನ್ನು ಶಾಲೆಗಳು ವಸೂಲಿ ಮಾಡತಕ್ಕದ್ದಲ್ಲ.
7 ಈ ಸಂಬಂಧ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ, ಅನುಬಂಧ-2 ರಲ್ಲಿ ಇರುವಂತೆ ರೂ.50/- ಛಾಪಾ ಕಾಗದಲ್ಲಿ ಶಾಲೆಯ ಮುಖ್ಯಸ್ಥರು ಲಿಖಿತ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
8 ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಮಾತ್ರ ದಾಖಲಿಸಿ ಅದೇ ಶಾಲೆಯಲ್ಲಿ 10ನೇ ತರಗತಿಯವರೆಗೆ ಮುಂದುವರೆಸಬೇಕು. (ಒಂದು ವೇಳೆ, ವಿದ್ಯಾರ್ಥಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ವಸತಿ ಶಾಲೆಯಲ್ಲಿ ಪ್ರವೇಶ ದೊರೆತಲ್ಲಿ, ಆ ವಿದ್ಯಾರ್ಥಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ.)
9 ಈ ಹಿಂದೆ ಅನುಮತಿಯೊಂದಿಗೆ ದಾಖಲುಗೊಂಡ ವಿದ್ಯಾರ್ಥಿಗಳು, ಅವರು 10ನೇ ತರಗತಿ ಪೂರ್ಣಗೊಳಿಸುವವರೆಗೆ ಆ ಶಾಲೆಯಲ್ಲಿ ಮುಂದುವರೆಸಬೇಕು. (ಒಂದು ವೇಳೆ, ವಿದ್ಯಾರ್ಥಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ವಸತಿ ಶಾಲೆಯಲ್ಲಿ ಪ್ರವೇಶ ದೊರೆತಲ್ಲಿ, ಆ ವಿದ್ಯಾರ್ಥಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ.)
10 ದಾಖಲುಗೊಂಡ ವಿದ್ಯಾರ್ಥಿಗಳ ಪ್ರಗತಿ ಪತ್ರ ಹಾಗೂ ಫಲಿತಾಂಶವನ್ನು ಆಯಾ ಶಾಲೆಯ ಮುಖ್ಯಸ್ಥರು, ಸಂಬಂಧಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ನೀಡಬೇಕು.
11 ಒಂದು ವೇಳೆ, ಶಾಲೆಯು ನಿಗದಿಪಡಿಸಿದ ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲಿ, ಆ ಶಾಲೆಗೆ ನೀಡುವ ಸೌಲಭ್ಯಗಳನ್ನು ಕೂಡಲೇ ಹಿಂತೆಗೆದುಕೊಳ್ಳಲಾಗುವುದು.
ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಯ್ಕೆ ವಿಧಾನ:
1 ಜಿಲ್ಲೆಯ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡಿ, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕು.
2 ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಸಂಸ್ಥೆವಾರು ಅನುಬಂಧ-1 ರಲ್ಲಿ ನಿಗದಿಪಡಿಸಿರುವ ಗುರಿಗಳಿಗೆ ಅನುಗುಣವಾಗಿ ಅರ್ಹ ವಿದ್ಯಾರ್ಥಿಗಳನ್ನು ಲಾಟರಿ ಮುಖಾಂತರ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು. ಈ ಪ್ರಕ್ರಿಯೆಯನ್ನು ಆಯಾ ವರ್ಷದ ಮೇ ಅಂತ್ಯದೊಳಗಾಗಿ ಮಾಡಬೇಕು.
3 ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ, ಅಂದರೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸಬಹುದು. ಬಾಲಕ ಇಲ್ಲದಿದ್ದಲ್ಲಿ, ಆ ಕುಟುಂಬದ ಇಬ್ಬರು ಬಾಲಕಿಯರಿಗೆ ಅವಕಾಶ ನೀಡಬಹುದು.
4 ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಅನುಮೋದನೆಗಾಗಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಜಿಲ್ಲಾಧಿಕಾರಿಗಳ ಮೂಲಕ ಆಯ್ಕೆ ಪ್ರಕ್ರಿಯೆಯ ನಡವಳಿಯೊಂದಿಗೆ ಸಲ್ಲಿಸಬೇಕು.
5 6ನೇ ತರಗತಿಯನ್ನು ಹೊರತುಪಡಿಸಿ, ಉಳಿದ ಯಾವುದೇ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಬಾರದು.
6 ವಿದ್ಯಾರ್ಥಿಗಳಿಂದ ಅಥವಾ ಅವರ ತಂದೆ/ತಾಯಿ/ಪೋಷಕರಿಂದ ಹೆಚ್ಚುವರಿ ಶುಲ್ಕಗಳನ್ನು ಶಾಲೆಗಳು ವಸೂಲಿ ಮಾಡತಕ್ಕದ್ದಲ್ಲ.
7 ಒಟ್ಟು ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ.50 ರಷ್ಟು ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು.
8 ಬಾಲಕಿಯರಿಗೆ ಕನಿಷ್ಠ ಶೇ.50 ರಷ್ಟು ಮೀಸಲಾತಿಯನ್ನು ನೀಡಬೇಕು .