ಹಿಂದಿನ ಪುಟಕ್ಕೆ
ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ:
ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ
ಯೋಜನೆ ಉದ್ದೇಶ ಮತ್ತು ಅರ್ಹತಾ ವಿದ್ಯಾರ್ಥಿವೇತನದ ದರಗಳು:
ಅಲೆಮಾರಿ / ಅರೆ ಅಲೆಮಾರಿ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಶಿಕ್ಷಣವನ್ನು ಮುಂದುವರೆಸಲು ಹಾಗೂ ಈ ಹಂತದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ವಿದ್ಯಾಲಯದಿಂದ ಅಂಗೀಕೃತವಾದ ಕೋರ್ಸಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಅರ್ಹತೆಯ ಆಧಾರದ ಮೇಲೆ ಈ ಕೆಳಕಾಣಿಸಿದ ದರಗಳಲ್ಲಿ ಅರ್ಹತಾ ವಿದ್ಯಾರ್ಥಿವೇತನ ಮಂಜೂರು ಮಾಡಲು ಈ ಯೋಜನೆಯ ಅನುಷ್ಠಾನಕ್ಕಾಗಿ ಮಂಜೂರಾತಿ ನೀಡಿದೆ.
ಮೆಟ್ರಿಕ್ ನಂತರದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಕಾಲೇಜು ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನವನ್ನು ಈ ಕೆಳಕಾಣಿಸಿದ ದರಗಳಲ್ಲಿ ಮಂಜೂರು ಮಾಡಲು ಆದೇಶಿಸಿದೆ.
ಕ್ರ.ಸಂ. ತರಗತಿ ಮಾಸಿಕ ವಿದ್ಯಾರ್ಥಿವೇತನದ ದರ ಅವಧಿ
1 ಪಿ.ಯು.ಸಿ. ಮತ್ತು ಡಿಪ್ಲೊಮಾ ರೂ.300/- 10 ತಿಂಗಳಿಗೆ
2 ಪದವಿ ಮತ್ತು ಸ್ನಾತಕೋತ್ತರ ಪದವಿ ರೂ.400/- 10 ತಿಂಗಳಿಗೆ
2 ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಬಿಇ, ಎಂ.ಬಿ.ಬಿ.ಎಸ್., ಬಿ.ಡಿ.ಎಸ್.,
ತತ್ಸಮಾನವಾದ ಇನ್ನಿತರ ತಾಂತ್ರಿಕ/ವೃತ್ತಿಪರ ಕೋರ್ಸುಗಳಿಗೆ
ರೂ.400/- 10 ತಿಂಗಳಿಗೆ
ಅರ್ಹತೆ:
1 ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಗಳಿಗೆ ಸೇರಿರಬೇಕು.
2 ಅಭ್ಯರ್ಥಿಯು ಈ ಯೋಜನೆಯ ಸೌಲಭ್ಯಕ್ಕೆ ಪ್ರಥಮವಾಗಿ ಅರ್ಜಿ ಸಲ್ಲಿಸಲು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3 ಈ ಅರ್ಹತಾ ವಿದ್ಯಾರ್ಥಿ ವೇತನದ ನವೀಕರಣಕ್ಕೆ ವಿದ್ಯಾರ್ಥಿಯು ಹಿಂದಿನ ತರಗತಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.
4 ವಿದ್ಯಾರ್ಥಿಯು ಪೋಷಕರ/ಪಾಲಕರ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷಗಳಿಗಿಂತ ಮೀರಿರಬಾರದು.
5 ವಿದ್ಯಾರ್ಥಿಯು ಸರ್ಕಾರದಿಂದ/ವಿಶ್ವವಿದ್ಯಾಲಯದಿಂದ ಇನ್ಯಾವುದೇ ವಿದ್ಯಾರ್ಥಿವೇತನ ಅಥವಾ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ ಪಡೆದಿರಬಾರದು.
ಪ್ರವರ್ಗ 1 2ಎ 2ಬಿ 3ಎ 3ಬಿ ಎಸ್.ಸಿ. ಎಸ್.ಟಿ. ಒಟ್ಟು
ಶೇಕಡವಾರು ಅನುಪಾತ 10 35 09 09 12 21 4 100%
ಸೌಲಭ್ಯಗಳು:
1 ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.700/- ಗಳ ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರ.
2 ಪ್ರತಿ ವಿದ್ಯಾರ್ಥಿಗೆ ರೂ.200/- ಗಳ ವೆಚ್ಚದಲ್ಲಿ 2 ಜೊತೆ ಸಮವಸ್ತ್ರ.
3 ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ರೂ. 100/- ಗಳ ವೆಚ್ಚದಲ್ಲಿ ಪಠ್ಯಪುಸ್ತಕ, ಲೇಖನ ಸಾಮಗ್ರಿಗಳ ಪೂರೈಕೆ.
4 ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.25/- ಗಳ ಸಂಕೀರ್ಣ ವೆಚ್ಚದಲ್ಲಿ ಸೋಪು, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ ಪೂರೈಕೆ.
5 ಪ್ರತಿ ವಿದ್ಯಾರ್ಥಿಗೆ ರೂ.300/- ಗಳ ವೆಚ್ಚದಲ್ಲಿ ಮುರು ವರ್ಷಕ್ಕೊಮ್ಮೆ ಹಾಸಿಗೆ ಹೊದಿಕೆ ಸರಬರಾಜು.
6 ಪ್ರತಿ ವಿದ್ಯಾರ್ಥಿಗೆ (ಬಾಲಕ) ರೂ.50/- ಗಳ ವೆಚ್ಚದಲ್ಲಿ ಕ್ಷೌರ ವ್ಯವಸ್ಥೆ.
7 ಪ್ರತಿ ಆಶ್ರಮ ಶಾಲೆಗೆ ವಾರ್ಷಿಕವಾಗಿ ರೂ. 750/- ಗಳ ವೆಚ್ಚದಲ್ಲಿ ದಿನಪತ್ರಿಕೆ ಪೂರೈಕೆ.
8 ಪ್ರತಿ ಆಶ್ರಮ ಶಾಲೆಗೆ ವಾರ್ಷಿಕ ರೂ.1000/- ಗಳ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ.
9 ಪ್ರತಿ ಆಶ್ರಮ ಶಾಲೆಗೆ ಮಾಹೆಯಾನ ರೂ.300/-ಗಳ ವೆಚ್ಚದಲ್ಲಿ ನೈರ್ಮಲ್ಯತೆ ನಿರ್ವಹಣೆ.
10 ಪ್ರತಿ ಆಶ್ರಮ ಶಾಲೆಗೆ ಮಾಹೆಯಾನ ರೂ.1500/- ಗಳಂತೆ (ಅಥವಾ ವಾಸ್ತವಿಕ) ವೆಚ್ಚದಲ್ಲಿ 12 ತಿಂಗಳ ಅವಧಿಗೆ ವಿದ್ಯುತ್ ಚ್ಛಕ್ತಿ ವೆಚ್ಚ.
11 ಪ್ರತಿ ಆಶ್ರಮ ಶಾಲೆಗೆ ಮಾಹೆಯಾನ ರೂ.10,000/- ಗಳಂತೆ (ಅಥವಾ ವಾಸ್ತವಿಕ ಬಾಡಿಕೆ) 12 ತಿಂಗಳ ಅವಧಿಗೆ ಬಾಡಿಗೆ ವೆಚ್ಚ.