ಹಿಂದಿನ ಪುಟಕ್ಕೆ
ನಿವೇಶನ ರಹಿತರಿಗೆ ವಸತಿ ನಿವೇಶನ ಒದಗಿಸಲು ಜಮೀನು ಖರೀದಿ:
ನಿವೇಶನ ರಹಿತರಿಗೆ ವಸತಿ ನಿವೇಶನ ಒದಗಿಸಲು ಜಮೀನು ಖರೀದಿ
ಯೋಜನೆಯ ಉದ್ದೇಶ ಮತ್ತು ಘಟಕ ವೆಚ್ಚದ ವಿವರ:
ಅಲೆಮಾರಿ / ಅರೆ ಅಲೆಮಾರಿ ಜನಾಂಗದ ಹೆಚ್ಚಿನ ಕುಟುಂಬಗಳು ನಿವೇಶನವಿಲ್ಲದೆ ವಸತಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.ಇವರನ್ನು ಒಂದು ಕಡೆ ನೆಲೆ ನಿಲ್ಲುವಂತೆ ಮಾಡಲು ನಿವೇಶನವನ್ನು ಒದಗಿಸಿ ವಸತಿ ಸೌಲಭ್ಯವನ್ನು ಕಲ್ಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನವನ್ನು ಹಂಚಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಿ ಜಮೀನು ಲಭ್ಯವಾಗದೇ ಇರುವ ಕಡೆ ಖಾಸಗಿ ಜಮೀನನ್ನು ಖರೀದಿಸಿ ನಿವೇಶನ ಹಂಚಿಕೆಯನ್ನು ಮಾಡಬೇಕಾಗಿರುತ್ತದೆ.
1 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳೂ, ಆಸಕ್ತ ಮಾರಾಟಗಾರರಿಂದ ಜಮೀನಿನ ದಾಖಲೆಗಳು,ದರದ ವಿವರ ಹಾಗೂ ಮಾರಾಟ ಮಾಡಲು ಒಪ್ಪಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ಪಡೆಯಬೇಕು.
2 ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಜಮೀನು ಖರೀದಿ ಸಮಿತಿಯ ಸಭೆಯಲ್ಲಿ ಜಮೀನಿನ ದಾಖಲೆಗಳನ್ನು ಹಾಗೂ ದರವನ್ನು ಪರಿಶೀಲಿಸಿ, ಖರೀದಿಸಬಹುದಾದ ದರವನ್ನು ನಿರ್ಣಯಿಸಿ ಪ್ರಸ್ತಾವನೆಯನ್ನು ನಡವಳಿಯೊಂದಿಗೆ,ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.
3 ನಿಯಮಾನುಸಾರ ಪರಿಶೀಲಿಸಿ ಅನುದಾನ ಬಿಡುಗಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು.
ನಿಬಂಧನೆಗಳು:
1 ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಆದೇಶ ಸಂ:ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65, ದಿನಾಂಕ:01-02-1966 ರಲ್ಲಿ ನಮೂದಿಸಿರುವ ಅಲೆಮಾರಿ / ಅರೆ ಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡುವುದು.
2 ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಮೀನು ಖರೀದಿ ಸಮಿತಿಯಲ್ಲಿ ಸರ್ಕಾರದ ನಿಯಮಾವಳಿ ಅನುಸಾರ ಮಾರ್ಗಸೂಚಿಗಳನ್ವಯ ಜಮೀನು ಖರೀದಿಸಿ, ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚುವುದು.
3 ನಿವೇಶನವನ್ನು ಕುಟುಂಬ ಮಹಿಳೆಯ ಹೆಸರಿನಲ್ಲಿ ನೊಂದಣಿ ಮಾಡತಕ್ಕದ್ದು.
4 ಖರೀದಿಗೆ ಪ್ರಸ್ತಾಪಿಸುವ ಜಮೀನು ಯಾವುದೇ ಋಣಭಾರದಿಂದ ಮುಕ್ತವಾಗಿರತಕ್ಕದ್ದು.