ಹಿಂದಿನ ಪುಟಕ್ಕೆ
ಮುಚ್ಚಳಿಕೆ ಪತ್ರ:
ಮುಚ್ಚಳಿಕೆ ಪತ್ರ
ಅನುಬಂಧ-2
“ಮುಚ್ಚಳಿಕೆ ಪತ್ರ”
ಪ್ರಾಂಶುಪಾಲರು/ಮುಖ್ಯಸ್ಥರು.................................. ಶಾಲೆ ಆದ ನಾನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು................................ ಜಿಲ್ಲೆ ಇವರಿಗೆ ಈ ಕೆಳಗಿನ ನಿಬಂಧನೆಗಳನ್ನು ಒಪ್ಪಿ ಬರೆದುಕೊಟ್ಟ ಮುಚ್ಚಳಿಕೆ ಪ್ರಮಾಣ ಪತ್ರ.
1 ಅಲೆಮಾರಿ / ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಲುವಾಗಿ ನಮ್ಮ ಸಂಸ್ಥೆಗೆ ಒಬ್ಬ ವಿದ್ಯಾರ್ಥಿಗೆ ವಾರ್ಷಿಕವಾಗಿ ಸರ್ಕಾರ ನಿಗದಿಪಡಿಸಿದ ರೂ. ......................... ಗಳ ಶುಲ್ಕದಲ್ಲಿ ಶಿಕ್ಷಣವನ್ನು ನೀಡಲು ನಾವು ಬದ್ಧರಿರುತ್ತೇವೆ.
2 ನವೀಕರಣ ಮತ್ತು ಪ್ರವೇಶ ಪಡೆದ ಹೊಸ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಕ್ಷಣವನ್ನು ಮುಕ್ತಾಯಗೊಳಿಸುವ ತನಕ ಇದೇ ಶುಲ್ಕವನ್ನು ಪಡೆಯಲು ನಾವು ಒಪ್ಪಿರುತ್ತೇವೆ.
3 ವಿದ್ಯಾರ್ಥಿಗಳಿಂದ ಅಥವಾ ಅವರ ತಂದೆ/ತಾಯಿ/ಪೋಷಕರಿಂದ ಹೆಚ್ಚುವರಿ ಶುಲ್ಕವನ್ನು ನಾವು ವಸೂಲಿ ಮಾಡುವುದಿಲ್ಲ.
4 ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ನವೀಕರಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನಾವು ಸಂಪೂರ್ಣವಾಗಿ ಶ್ರಮಿಸುತ್ತೇವೆ. ಈ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ.
5 ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
6 ವಿದ್ಯಾರ್ಥಿಗಳು ಅರ್ಧದಲ್ಲಿ ಶಾಲೆ ಬಿಡದಂತೆ ನೋಡಿಕೊಳ್ಳುತ್ತೇವೆ.
7 ಸರ್ಕಾರ ಕಾಲಕಾಲಕ್ಕೆ ಈ ಸಂಬಂಧ ಹೊರಡಿಸುವ ಸೂಚನೆಗಳನ್ನು ಪಾಲಿಸುತ್ತೇವೆ.
8 ನಮ್ಮ ಶಾಲೆ ಕನ್ನಡ/ಆಂಗ್ಲ ಮಾಧ್ಯಮದ್ದಾಗಿರುತ್ತದೆ.
9 ನಮ್ಮ ಶಾಲೆಯಲ್ಲಿ ಸೂಕ್ತ ವಸತಿ, ಭೋಜನಾ, ಸಮವಸ್ತ್ರ, ಪಠ್ಯ-ಪುಸ್ತಕ, ಪ್ರವಾಸ, ಹಾಗೂ ಇತರೆ ಸೌಲಭ್ಯಗಳನ್ನು, ಇತರೆ ವಿದ್ಯಾರ್ಥಿಗಳಿಗೆ ಒದಗಿಸುವಂತೆ, ಈ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಗೂ ಸಹ ಒದಗಿಸಲಾಗುವುದು.
10 6ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳನ್ನು 10 ನೇ ತರಗತಿಯವರೆಗೆ ಮುಂದುವರೆಸಲಾಗುವುದು. (ಒಂದು ವೇಳೆ, ವಿದ್ಯಾರ್ಥಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ವಸತಿ ಶಾಲೆಯಲ್ಲಿ ಪ್ರವೇಶ ದೊರೆತಲ್ಲಿ, ಆ ವಿದ್ಯಾರ್ಥಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ನಮ್ಮ ಅಭ್ಯಂತರವಿರುವುದಿಲ್ಲ.)
11 ಈ ಹಿಂದೆ ಅನುಮತಿಯೊಂದಿಗೆ ದಾಖಲುಗೊಂಡ ವಿದ್ಯಾರ್ಥಿಗಳು, ಅವರು 10ನೇ ತರಗತಿ ಪೂರ್ಣಗೊಳಿಸುವವರೆಗೆ ನಮ್ಮ ಶಾಲೆಯಲ್ಲಿ ಮುಂದುವರೆಸುತ್ತೇವೆ. (ಒಂದು ವೇಳೆ, ವಿದ್ಯಾರ್ಥಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ವಸತಿ ಶಾಲೆಯಲ್ಲಿ ಪ್ರವೇಶ ದೊರೆತಲ್ಲಿ, ಆ ವಿದ್ಯಾರ್ಥಿ ಆ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ನಮ್ಮ ಅಭ್ಯಂತರವಿರುವುದಿಲ್ಲ)
12 ದಾಖಲುಗೊಂಡ ವಿದ್ಯಾರ್ಥಿಗಳ ಪ್ರಗತಿ ಪತ್ರ ಹಾಗೂ ಫಲಿತಾಂಶವನ್ನು ನಾವು ಸಂಬಂಧಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ನೀಡುತ್ತೇವೆ.
13 ಒಂದು ವೇಳೆ, ಶಾಲೆಯು ನಿಗದಿಪಡಿಸಿದ ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲಿ, ಈ ಶಾಲೆಗೆ ನೀಡುವ ಸೌಲಭ್ಯಗಳನ್ನು ಕೂಡಲೇ ಸರ್ಕಾರ ಹಿಂತೆಗೆದುಕೊಳ್ಳಬಹುದು.
ದಿನಾಂಕ:...........................
ಸ್ತಳ:
ಸಹಿ:
ಹೆಸರು:
(ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ)
ಸಂಸ್ಥೆಯ ಮೊಹರು