ಹಿಂದಿನ ಪುಟಕ್ಕೆ
I ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು:
I ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳು
ಮಾಧ್ಯಮಿಕ / ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ
ಯೋಜನೆಯ ಉದ್ದೇಶ ಮತ್ತು ಪ್ರೋತ್ಸಾಹ ಧನ ದರಗಳು:
ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದರ ಮೂಲಕ ಅವರಲ್ಲಿ ಮಧ್ಯದಲ್ಲಿ ಶಾಲೆ ಬಿಡುವವರ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಈ ಹಂತದ ಶಿಕ್ಷಣ ಮುಂದುವರಿಕೆಯ ಉದ್ದೇಶದಿಂದ, ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಕೆಳಕಾಣಿಸಿದ ದರಗಳಲ್ಲಿ ಪ್ರೋತ್ಸಾಹಧನ ಮಂಜೂರು ಮಾಡಲು ಈ ಕಾರ್ಯಕ್ರಮವನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ.
ಕ್ರ.ಸಂ. ತರಗತಿ ಮಾಹೆಯಾನ ಪ್ರೋತ್ಸಾಹಧನ ದರಗಳು ಅವಧಿ
1 5 ರಿಂದ 7ನೇ ತರಗತಿ ರೂ.100/- ರೂ.150/- 10 ತಿಂಗಳು
2 8 ರಿಂದ 10ನೇ ತರಗತಿ ರೂ.150/- ರೂ.200/- 10 ತಿಂಗಳು
ಅರ್ಹತೆ:
1 ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಕ್ಕೆ ಸೇರಿದ ವಿದ್ಯಾರ್ಥಿಯಾಗಿರಬೇಕು.
2 ವಿದ್ಯಾರ್ಥಿಯ,ಅವರ ತಂದೆ-ತಾಯಿ ಪಾಲಕರು/ಪೋಷಕರ ವಾರ್ಷಿಕ ಆದಾಯ ರೂ.2.00 ಲಕ್ಷ ಮಿತಿಯೊಳಗಿರಬೇಕು.
3 ವಿದ್ಯಾರ್ಥಿಯು, 5 ರಿಂದ 10ನೇ ತರಗತಿಯವರೆಗೆ, ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
4 ಈ ಯೋಜನೆಯಡಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿ ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
5 ವಿದ್ಯಾರ್ಥಿಯು ಸರ್ಕಾರದ ಇನ್ನಾವುದೇ ಯೋಜನೆಯಿಂದ ವಿದ್ಯಾರ್ಥಿವೇತನ ಅಥವಾ ವಸತಿನಿಲಯ ಸೌಲಭ್ಯವನ್ನು ಪಡೆದಿರಬಾರದು.
6 ಈ ಪ್ರೋತ್ಸಾಹಧನವನ್ನು ನವೀಕರಿಸಲು ವಿದ್ಯಾರ್ಥಿಯು ಹಿಂದಿನ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.
ಅನುದಾನ ಹಂಚಿಕೆ ಹಾಗೂ ಮಂಜೂರಾತಿ ವಿಧಾನ:
1 ಆಯಾ ವರ್ಷ, ಮೆಟ್ರಿಕ್ ಪೂರ್ವ ವಿಶೇಷ ಪ್ರೋತ್ಸಾಹಧನ ಮಂಜೂರಾತಿಗಾಗಿ ಅಗತ್ಯವಿರುವ ಅನುದಾನದ ಬಗ್ಗೆ ಪ್ರತಿ ಜಿಲ್ಲೆಯಿಂದ ಬೇಡಿಕೆಯನ್ನು ಪಡೆದು, ಅನುದಾನ ಹಂಚಿಕೆ ಮಾಡಲಾಗುವುದು.
2 ಅರ್ಹ ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳೆಲ್ಲರಿಗೂ ವಿದ್ಯಾರ್ಥಿವೇತನವನ್ನು ನೀಡಲು ಅನುದಾನ ಲಭ್ಯವಿರುವ ಕಾರಣ, ಅಗತ್ಯವಿರುವ ಅನುದಾನದ ಬೇಡಿಕೆಯನ್ನು ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರಿಗೆ ನೀಡತಕ್ಕದ್ದು.
3 ರಾಜ್ಯವಲಯದಿಂದ ಜಿಲ್ಲಾ ಪಂಚಾಯತ್ ಗೆ ಬಿಡುಗಡೆ ಮಾಡುವ ಅನುದಾನವನ್ನು ಬೇಡಿಕೆಯನ್ನಾಧರಿಸಿ, ಸಂಬಂಧಪಟ್ಟ ತಾಲ್ಲೂಕಿಗೆ ಜಿಲ್ಲಾ ಮಟ್ಟದಲ್ಲಿ ಮರು ಬಿಡುಗಡೆ ಮಾಡತಕ್ಕದ್ದು.
4 ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಳ ವಿಸ್ತರಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.
5 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ, ಹಾಜರಾತಿಯ ಆಧಾರದ ಮೇಲೆ, ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ವಿದ್ಯಾರ್ಥಿವೇತನವನ್ನು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮಂಜೂರು ಮಾಡತಕ್ಕದ್ದು.