ಹಿಂದಿನ ಪುಟಕ್ಕೆ
ಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲು ವಿಶೇಷ ಯೋಜನೆ:
ಅಲೆಮಾರಿ ಜನಾಂಗದವರ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲು ವಿಶೇಷ ಯೋಜನೆ
ಯೋಜನೆಯ ಉದ್ದೇಶ:
1977 ರಲ್ಲಿ ಹಿಂದುಳಿದ ವರ್ಗಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಿರುವುದಕ್ಕೆ ಮುಂಚಿತವಾಗಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರೆಂದು ಗುರ್ತಿಸಲ್ಪಟ್ಟು, ಪ್ರಸ್ತುತ ಜಾರಿಯಲ್ಲಿರುವ ದಿನಾಂಕ:30-03-2002 ರ ಸರ್ಕಾರದ ಆದೇಶ ಸಂ:ಸಕಿ 225 ಬಿಸಿಎ 2000 ರಲ್ಲಿನ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ-1 ರಲ್ಲಿರುವ ಅಲೆಮಾರಿ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಇತರೆ ಜಾತಿಗಳವರೊಡನೆ ಸ್ಪರ್ಧಿಸಿ ಸೌಲಭ್ಯ ಪಡೆಯುವ ಚೈತನ್ಯ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯ ಕಲ್ಪಿಸಲು ಮತ್ತು ಅವರ ಸ್ವಯಂ ಉದ್ಯೋಗಕ್ಕಾಗಿ ಸೂಕ್ತ ತರಬೇತಿಯನ್ನು ನೀಡಲು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಆಯಾ ಯೋಜನೆಗಳ ನಿಯಮಾನುಸಾರ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗುತ್ತದೆ.
1 ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ.
ಅಲೆಮಾರಿ / ಅರೆ ಅಲೆಮಾರಿ ಜನಾಂಗಕ್ಕೆ ಸೇರಿದವರು ಕೈಗೊಳ್ಳುವ ಆರ್ಥಿಕ ಚಟುವಟಿಗಳಿಗೆ ನಿಗಮದಿಂದ ಗರಿಷ್ಠ ರೂ.35,000/- ಗಳ ಸಾಲವನ್ನು ಒದಗಿಸಲಾಗುವುದು. ಇದರಲ್ಲಿ ಶೇ.30 ರಷ್ಟು ಗರಿಷ್ಠ ರೂ. 10,000/- ಗಳ ಸಹಾಯಧನ ಲಭ್ಯವಿರುತ್ತದೆ. ಅರ್ಜಿದಾರರು ಹಿಂದುಳಿದ ವರ್ಗಗಳ ಅಲೆಮಾರಿ / ಅರೆ ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/- ಗಳು ಪಟ್ಟಣ ಪ್ರದೇಶದವರಿಗೆ ರೂ.55,000/- ಗಳ ಒಳಗಿರಬೇಕು. ವಯಸ್ಸು 55 ವರ್ಷಗಳ ಮಿತಿಯಲ್ಲಿರಬೇಕು. ಈವರೆಗೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದಿರಬಾರದು.
2 ವೈಯಕ್ತಿಕ ನೀರಾವತಿ ಕೊಳವೆ ಬಾವಿ ಯೋಜನೆ.
ಯೋಜನೆ ಉದ್ದೇಶ:
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ಕೃಷಿ ಭೂಮಿ ಹೊಂದಿದ್ದಲ್ಲಿ ಅಂತವರಿಗೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭವೃಧ್ಧಿ ನಿಗಮದ ಮೂಲಕ ವೈಯಕ್ತಿಕ ನೀರಾವತಿ ಸೌಲಭ್ಯ ಕಲ್ಪಿಸಿ, ಅವರ ಕೃಷಿ ಅಭಿವೃದ್ಧಿಗೆ ನೆರವು ನೀಡಬಹುದಾಗಿದೆ.
ಈಗಾಗಲೇ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮವು ಪ್ರವರ್ಗ-1 ಹಾಗೂ ಪ್ರವರ್ಗ-2ಎ ನಲ್ಲಿರುವ ಹಿಂದುಳಿದ ವರ್ಗಗಳ ಕೃಷಿಕರಿಗೆ ಅನುಷ್ಠಾನಗೊಳಿಸುತ್ತಿರುವ ವೈಯಕ್ತಿಕ ನೀರಾವರಿ ಯೋಜನೆ ಮಾದರಿಯಲ್ಲೇ ಅಲೆಮಾರಿ ಜನಾಂಗದವರಿಗೂ ಅನುಷ್ಠಾನಗೊಳಿಸಬೇಕು.
ಅರ್ಹತೆ:
1 ಈ ಯೋಜನೆಯ ಸೌಲಭ್ಯ ಪೆಡಯಲು ಅರ್ಜಿದಾರರು ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಕ್ಕೆ ಸೇರಿದವರೆಂದು ಹಿಂದುಳಿದ ವರ್ಗಗಳನ್ನು ಪ್ರತ್ಯೇಕವಾಗಿ 1977 ರಲ್ಲಿ ವರ್ಗೀಕರಿಸುವ ಪೂರ್ವದಲ್ಲಿಯೇ ದಿನಾಂಕ:01-02-1966 ರ ರಾಜ್ಯ ಸರ್ಕಾರದ ಸಂಖ್ಯೆ:ಪಿ.ಐ.ಎ.ಎಸ್. 262/1965 ರ ಸರ್ಕಾರದ ಆದೇಶದಲ್ಲಿ ಗುರ್ತಿಸಲ್ಪಟ್ಟ ಹಾಲಿ ಜಾರಿಯಲ್ಲಿರುವ ಸರ್ಕಾರದ 30-03-2002 ರ ಆದೇಶದಲ್ಲಿನ ಹಿಂದುಳಿದ ವರ್ಗಗಳ ಪ್ರವರ್ಗ-1 ಪಟ್ಟಿಯಲ್ಲಿರತಕ್ಕದ್ದು.
2 ಸಣ್ಣ ಹಾಗೂ ಸಣ್ಣ ರೈತ ಕುಟುಂಬಕ್ಕೆ ಸೇರಿದ ಅಲೆಮಾರಿ /ಅರೆ ಅಲೆಮಾರಿ ಜನಾಂಗದವರು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
3 ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಮತರ ಪ್ರದೇಶದವರಿಗೆ ರೂ.40,000.- ಗಳಿಗೆ ಹಾಗೂ ನಗರ ಪ್ರದೇಶದವರಿಗೆ ರೂ.55,000/- ಗಳಿಗಿಂತ ಮೀರಿರಬಾರದು.
ಘಟಕ ವೆಚ್ಚ:
ಸರ್ಕಾರದ ಆದೇಶ ಸಂಖ್ಯೆ ಸಕಇ 152 ಎಸ್.ಡಿ.ಸಿ. 02 ದಿನಾಂಕ:16-09-2006 ರ ರೀತ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ರೂ.1.50 ಲಕ್ಷಗಳ ಘಟಕ ವೆಚ್ಚವನ್ನೇ ಅಲೆಮಾರಿ ಜನಾಂಗದವರಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವೈಯಕ್ತಿಕ ನೀರಾವರಿ ಯೋಜನೆಗೆ ಅಳವಡಿಸಿಕೊಂಡು, ರೂ.1,00,000/- ಸಹಾಯಧನ ಹಾಗೂ ಗರಿಷ್ಠ ರೂ.50,000/- ಗಳ ಸಾಲಸೌಲಭ್ಯವನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೀಡಬೇಕು.
ಸಾಲದ ಮೊತ್ತಕ್ಕೆ ಬಡ್ಡಿದರ:
ಪ್ರತಿಯೊಂದು ವೈಯಕ್ತಿಕ ನೀರಾವರಿ ಕೊಳವೆಬಾವಿ ಘಟಕಕ್ಕೆ ನಿಗಮದಿಂದ ನೀಡಲಾಗುವ ಗರಿಷ್ಠ ರೂ.50,000/- ಸಾಲದ ಮೊತ್ತಕ್ಕೆ ನಿಗಮವು ವಾರ್ಷಿಕವಾಗಿ ಶೇ.4 ರಷ್ಟನ್ನು ಬಡ್ಡಿಯನ್ನು ವಿಧಿಸಬೇಕು.
ಫಲಾನುಭವಿಗಳ ಆಯ್ಕೆ:
ಈ ಜನಾಂಗದವರಿಗೆ ಹಮ್ಮಿಕೊಳ್ಳಲಾಗುವ ವೈಯಕ್ತಿಕ ನೀರಾವರಿ ಯೋಜನೆಗೂ ಸಹಾ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಫಲಾನುಭವಿಗಳ ಆಯ್ಕೆಗೆ ನಿಗಮವು ಈಗಾಗಲೇ ಅನುಸರಿಸುತ್ತಿರುವ ಕಾರ್ಯವಿಧಾನವನ್ನೇ ಅನುಸರಿಸುವುದು.