ಹಿಂದಿನ ಪುಟಕ್ಕೆ
ಆಶ್ರಮ ಶಾಲೆಗಳ ಪ್ರಾರಂಭ ಹಾಗೂ ನಿರ್ವಹಣೆ:
ಆಶ್ರಮ ಶಾಲೆಗಳ ಪ್ರಾರಂಭ ಹಾಗೂ ನಿರ್ವಹಣೆ
1) ಯೋಜನೆಯ ಉದ್ದೇಶ:
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಕುಟುಂಬಕ್ಕೆ ಸೇರಿದ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ನೆರವು ಹಾಗೂ ಉತ್ತೇಜನ ನೀಡುವ ದೃಷ್ಠಿಯಿಂದ 125 ಸಂಖ್ಯಾಬಲದ
4 ಆಶ್ರಮ ಶಾಲೆಗಳನ್ನು ಕೊಪ್ಪಳ ಕಲ್ಬುರ್ಗಿ, ಚಿಕ್ಕಮಗಳೂರು ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಈ ಆಶ್ರಮಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ
ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿ, ಹತ್ತಿರದಲ್ಲಿ ಸರ್ಕಾರಿ ಶಾಲೆ ಇಲ್ಲದೇ ಇದ್ದಲ್ಲಿ, ಶೈಕ್ಷಣಿಕ ಸೌಲಭ್ಯವನ್ನು ಕೂಡಾ ಒದಗಿಸಲಾಗುವುದು.
ಅ) ಅರ್ಹತೆ :
1.ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಗಳಿಗೆ ಸೇರಿರಬೇಕು.
2.1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆ ಪ್ರವೇಶಕ್ಕೆ ನಿಗದಿಪಡಿಸಿರುವ ಕನಿಷ್ಠ ವಯೋಮಿತಿ
ಉಳ್ಳವರಾಗಿರತಕ್ಕದ್ದು.
3.ಈ ಆಶ್ರಮ ಶಾಲೆಗಳಲ್ಲಿ ಶೇ.75 ಭಾಗ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಮೀಸಲಿಡಲಾಗಿರುತ್ತದೆ. ಉಳಿದ ಶೇಕಡ 25 ರಷ್ಟು ಸ್ಥಾನಗಳನ್ನು
ಈ ಕೆಳಗಿನ ಶೇಕಡವಾರು ಅನುಪಾತದಲ್ಲಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಮತ್ತು ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮಕ್ಕಳಿಗೆ ಕಾಯ್ದಿರಿಸಲಾಗಿರುತ್ತದೆ.
2.ಆಶ್ರಮ ಶಾಲೆಗಳ ಪ್ರಾರಂಭ ಹಾಗೂ ನಿರ್ವಹಣೆ:
ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರ ಕುಟುಂಬಕ್ಕೆ ಸೇರಿದ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ನೆರವು ಹಾಗೂ ಉತ್ತೇಜನ ನೀಡುವ ದೃಷ್ಟಿಯಿಂದ 125 ಸಂಖ್ಯಾಬಲದ
4 ಆಶ್ರಮ ಶಾಲೆಗಳನ್ನು ಕೊಪ್ಪಳ, ಕಲಬುರ್ಗಿ, ಚಿಕ್ಕಮಗಳೂರು ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಈ ಆಶ್ರಮಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ
ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿ, ಶೈಕ್ಷಣಿಕ ಸೌಲಭ್ಯವನ್ನು ಕೂಡಾ ಒದಗಿಸಲಾಗುತ್ತಿದೆ.
ಅ) ಅರ್ಹತೆ:
ಅ) ವಿದ್ಯಾರ್ಥಿಯು ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡಗಳಿಗೆ ಸೇರಿರಬೇಕು.
ಆ) 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲೆಯ ಪ್ರವೇಶಕ್ಕೆ ನಿಗದಿಪಡಿಸಿರುವ
ಕನಿಷ್ಠ ವಯೋಮಿತಿ ಉಳ್ಳವರಾಗಿರತಕ್ಕದ್ದು.
ಇ) ಈ ಆಶ್ರಮಶಾಲೆಗಳಲ್ಲಿ ಶೇ.75 ಭಾಗ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದ ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಲಾಗಿರುತ್ತದೆ.ಉಳಿದ ಶೇಕಡ 25ರಷ್ಟು ಸ್ಥಾನಗಳನ್ನು
ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಎ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮಕ್ಕಳಿಗೆ ಕಾಯ್ದಿರಿಸಲಾಗಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ. ಹಿಂವಕ 221 ಬಿಎಂಎಸ್ 2009, ದಿ:24.07.2009ರಲ್ಲಿ ರಚಿಸಿರುವ ಈ ಕೆಳಕಂಡ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯಲ್ಲಿ
ಈ ಆಶ್ರಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ತಾಲ್ಲೂಕು ಮಟ್ಟದಲ್ಲಿ ಕ್ರಮವಹಿಸಲಾಗುತ್ತದೆ.
1 ತಾಲ್ಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರು ಅಧ್ಯಕ್ಷರು
2 ತಾಲ್ಲೂಕಿನ ಉಳಿದ ಭಾಗ ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರು ಸದಸ್ಯರು
3 ಆಯಾ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರು ಸದಸ್ಯರು
4 ಸಂಬಂಧ ಪಟ್ಟ ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸದಸ್ಯರು
5 ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ) ಸದಸ್ಯರು
6 ಆಯಾ ತಾಲ್ಲೂಕಿನ ತಹಶೀಲ್ದಾರರು ಸದಸ್ಯರು
7 ಆಯಾ ತಾಲ್ಲೂಕಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸದಸ್ಯರು
8 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ
ವೇಳಾಪಟ್ಟಿ
1 ನವೀಕರಣ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ದಿನಾಂಕ ಜೂನ್ 1
2 ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಕಟಣೆ ನೀಡುವ ದಿನಾಂಕ ಮೇ 25
3 ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 15
4 ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕಡೆಯ ದಿನಾಂಕ ಜೂನ್ 20 ರಿಂದ 25
5 ಪ್ರವೇಶಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕ ಜೂನ್ 30

4) ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶವಕಾಶ ಸೌಲಭ್ಯ:
ಸರ್ಕಾರದ ಆದೇಶ ಸಂಖ್ಯೆ. ಹಿಂವಕ 424 ಬಿಎಂಎಸ್ 2013, ದಿನಾಂಕ:17-07-2013ರಲ್ಲಿ ಗುರುತಿಸಿರುವ ಪ್ರತಿಷ್ಠಿತ ಶಾಲೆಗಳಲ್ಲಿ ನಿಬಂಧನೆಗಳಿಗೊಳಪಟ್ಟು, ಅಲೆಮಾರಿ/ ಅರೆಅಲೆಮಾರಿ
ಜನಾಂಗದ ವಿದ್ಯಾರ್ಥಿಗಳಿಗೆ ಪ್ರವೇಶವಕಾಶವನ್ನು ಕಲ್ಪಿಸಲಾಗುತ್ತಿದೆ ಹಾಗೂ ನವೀಕರಣ ವಿದ್ಯಾರ್ಥಿಗಳಿಗೆ ಅವರ ಶಾಲಾ ವಿದ್ಯಾಭ್ಯಾಸ ಮುಗಿಯುವವರೆಗೆ ಶಾಲಾ ಹಾಗೂ ವಸತಿ ಶುಲ್ಕವನ್ನು
ಇಲಾಖೆಯಿಂದ ಭರಿಸಲಾಗುತ್ತಿದೆ.
ಅ) ಅರ್ಹತೆ:
1.ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಅಲೆಮಾರಿ/ಅರೆಅಲೆಮಾರಿ ಜಾತಿಗಳಿಗೆ ಸೇರಿರತಕ್ಕದ್ದು.(ಸರ್ಕಾರದ ಆದೇಶ ಸಂ.ಪಿಹೆಚ್ಎಕಸ್ 262 ಎಸ್ಇಗಡಬ್ಲ್ಯೂ
65, ಬೆಂಗಳೂರು, ದಿನಾಂಕ 1.2.1966 ರಲ್ಲಿ ಇರುವಂತೆ)
2. ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2.00 ಲಕ್ಷದೊಳಗಿರಬೇಕು.
ಆ) ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಯ್ಕೆ ವಿಧಾನ:
1.ಜಿಲ್ಲೆಯ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡಿ, ಅರ್ಹ ಅಲೆಮಾರಿ/
ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.
2.ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಸಂಸ್ಥೆವಾರು ಅನುಬಂಧ-1ರಲ್ಲಿ ನಿಗದಿಪಡಿಸಿರುವ ಗುರಿಗಳಿಗೆ ಅನುಗುಣವಾಗಿ ಅರ್ಹ ವಿದ್ಯಾರ್ಥಿಗಳನ್ನು ಲಾಟರಿ ಮುಖಾಂತರ,
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುವುದು. ಪ್ರಕ್ರಿಯೆಯನ್ನು ಆಯಾ ವರ್ಷದ ಮೇ ಅಂತ್ಯದೊಳಗಾಗಿ ನಡೆಸಲಾಗುವುದು.
3.ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ, ಅಂದರೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸಬಹುದು. ಬಾಲಕ ಇಲ್ಲದಿದ್ದಲ್ಲಿ,
ಆ ಕುಟುಂಬದ ಇಬ್ಬರು ಬಾಲಕಿಯರಿಗೆ ಅವಕಾಶ ನೀಡಬಹುದು.
4.ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಅನುಮೋದನೆಗಾಗಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು
ಇವರಿಗೆ ಜಿಲ್ಲಾಧಿಕಾರಿಗಳ ಮೂಲಕ ಆಯ್ಕೆ ಪ್ರಕ್ರಿಯೆಯ ನಡವಳಿಯೊಂದಿಗೆ ಸಲ್ಲಿಸಬೇಕು.
5.6ನೇ ತರಗತಿಯನ್ನು ಹೊರತುಪಡಿಸಿ, ಉಳಿದ ಯಾವುದೇ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಬಾರದು.
6.ಒಟ್ಟು ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ.50 ರಷ್ಟು ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು.
7.ಬಾಲಕಿಯರಿಗೆ ಕನಿಷ್ಠ ಶೇ.50 ರಷ್ಟು ಮೀಸಲಾತಿಯನ್ನು ನೀಡಬೇಕು.
5) ಅರಿವು ಮೂಡಿಸುವ ಕಾರ್ಯಕ್ರಮ:
ಗೊಲ್ಲ ಜನಾಂಗದವರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಕಂದಾಚಾರಗಳಿಂದ ಇರುವ ಪದ್ದತಿಯನ್ನು ಕೊನೆಗಾಣಿಸಲು ಹಾಗೂ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯದವರಿಗೆ
ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಜಿಲ್ಲೆಗಳಿಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲು ಸಂಬಂಧಪಟ್ಟ ಜಿಲ್ಲಾ ಹಿಂದುಳಿದ
ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು.
ಅ) ಆಯ್ಕೆ / ಮಂಜೂರಾತಿ ವಿಧಾನ:
1.ಗ್ರಾಮೀಣ ಭಾಗದ ಗೊಲ್ಲ ಹಾಗೂ ಇತರೆ ಅಲೆಮಾರಿ/ ಅರೆಅಲೆಮಾರಿ ಸಮುದಾಯದವರ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಕಾಲೋನಿ/ ಹಟ್ಟಿಗಳನ್ನು
ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ ಆಯ್ಕೆ ಮಾಡಲಾಗುವುದು.
2.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುವುದು.
3.ಅಲೆಮಾರಿ/ ಅರೆಅಲೆಮಾರಿ ಸಮುದಾಯದವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ/ ಇತರೆ ಇಲಾಖೆಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸವುದು.
4.ಗೊಲ್ಲ ಸಮುದಾಯದ ಕಾಲೋನಿಗಳಲ್ಲಿ ಹೆಣ್ಣು ಮಕ್ಕಳ ಹೆರಿಗೆ ಹಾಗೂ ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಗೊಲ್ಲರಹಟ್ಟಿಯಿಂದ ದೂರವಿಡುವ ಪದ್ದತಿಯ ವಿರುದ್ದ ಅರಿವನ್ನು ಮೂಡಿಸುವುದು.
5.ಮಾಹಿತಿ/ ಕರಪತ್ರ ಪ್ರಕಟಣೆ, ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಧನ, ಫೋಟೊ/ ವಿಡಿಯೋ ಚಿತ್ರೀಕರಣ ಹಾಗೂ ಇತರೆ ವೆಚ್ಚಗಳಿಗೆ ಒಂದು ಕಾರ್ಯಕ್ರಮಕ್ಕೆ ಗರಿಷ್ಠ ರೂ.10000/-ದಂತೆ
ಅನುದಾನವನ್ನು ಬಿಡುಗಡೆ ಮಾಡಲಾಗುವುದು.
6) ಮೂಲಭೂತ ಸೌಕರ್ಯಗಳು:
1. ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ:
ಅಲೆಮಾರಿ/ ಅರೆಅಲೆಮಾರಿ ಜನಾಂಗದ ಹೆಚ್ಚಾಗಿ ವಾಸಿಸುತ್ತಿರುವ ಕಾಲೋನಿಗಳಲ್ಲಿ ಹಾಗೂ ಹೊಸದಾಗಿ ನಿರ್ಮಾಣ ಮಾಡಿದ ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ
ನಿರ್ಮಾಣವನ್ನು ಮಾಡಿ ನಾಗರಿಕ ಸೌಲಭ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಅ) ನಿಬಂಧನೆಗಳು:
ಅಲೆಮಾರಿ/ ಅರೆಅಲೆಮಾರಿ ಜನಾಂಗದವರು ಹೆಚ್ಚಾಗಿ ವಾಸಿಸುತ್ತಿರುವ ಕಾಲೋನಿಗಳು ಹಾಗೂ ಹೊಸದಾಗಿ ನಿರ್ಮಿಸಿರುವ ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ
ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆ ಇವರಿಗೆ ಸಲ್ಲಿಸಬೇಕು.
ಆ) ಮಂಜೂರಾತಿ/ ಅನುಷ್ಟಾನ:
ಮೂಲಭೂತ ಸೌಕರ್ಯವನ್ನು ಒದಗಿಸಲು ಕೋರಿ ಬರುವ ಎಲ್ಲಾ ಪ್ರಸ್ತಾವನೆಗಳನ್ನು ಕರ್ನಾಟಕ ಅಲೆಮಾರಿ/ ಅರೆಅಲೆಮಾರಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಮಂಡಿಸಲಾಗುವುದು.
ಲಭ್ಯವಿರುವ ಅನುದಾನವನ್ನು ಆಧರಿಸಿ, ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
ಜಿಲ್ಲಾಧಿಕಾರಿಗಳ ಹಂತದಲ್ಲೇ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿ, ಅನುಷ್ಠಾನ ಮಾಡುವ ಸಂಸ್ಥೆಗಳನ್ನು ಗುರುತಿಸಿ, ಕಾಮಗಾರಿಯನ್ನು ಅನುಷ್ಠಾನ ಮಾಡಲಾಗುವುದು.
2.ವಸತಿ ಯೋಜನೆ:
ಅಲೆಮಾರಿ/ ಅರೆಅಲೆಮಾರಿ ಜನಾಂಗದ ವಸತಿರಹಿತರಿಗೆ ಅತಿ ಅಗತ್ಯ ಮೂಲಭೂತ ಸೌಕರ್ಯವಾದ ವಸತಿ ಸೌಲಭ್ಯವನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ನಿರ್ದಿಷ್ಟ ನೆಲೆ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಕಾರಣ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಈ ಜನಾಂಗವು ಅತ್ಯಂತ ಹಿಂದುಳಿದಿದೆ. ವಸತಿ
ಸೌಲಭ್ಯವನ್ನು ಕಲ್ಪಿಸಿ, ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
ಅ) ನಿಬಂಧನೆಗಳು:
1.ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸರ್ಕಾರದ ಆದೇಶ ಸಂ.ಪಿಹೆಚ್ಎಭಸ್ 262 ಎಸ್ಇತಡಬ್ಲ್ಯೂ 65, ದಿನಾಂಕ 01.02.1966 ರಲ್ಲಿ ನಮೂದಿಸಿರುವ
ಅಲೆಮಾರಿ/ ಅರೆಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡಲಾಗುವುದು.
2.ಫಲಾನುಭವಿಯು ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ವಸತಿ ಸೌಲಭ್ಯವನ್ನು ಪಡೆದಿರಬಾರದು.
3.ಕನಿಷ್ಟ 20 ವರ್ಷದವರೆಗೆ ಈ ನಿವೇಶನವನ್ನು ಪರಭಾರೆ ಪಡೆತಕ್ಕದ್ದಲ್ಲ. ಈ ಅವಧಿಯಲ್ಲಿ ಪರಭಾರೆ ಮಾಡಿದ್ದಲ್ಲಿ,ಮಾರಾಟ ಮಾಡುವಾಗ ಇದ್ದ ಮಾರುಕಟ್ಟೆ ಬೆಲೆಯನ್ನು
ಸರ್ಕಾರಕ್ಕೆ ಪಾವತಿ ಮಾಡಬೇಕು.
4.ನಿವೇಶನವು ಕುಟುಂಬದ ಮಹಿಳೆ/ ಪುರುಷನ ಹೆಸರಿನಲ್ಲಿ ನೊಂದಣಿ ಆಗಿರಬೇಕು.
5.ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನವಾಗುವ ಎಲ್ಲಾ ವಸತಿ ಯೋಜನೆಗಳ ನಿಯಮಗಳು ಈ ಯೋಜನೆಗೂ ಅನ್ವಯವಾಗುತ್ತದೆ.
6.ಕುಟುಂಬದ ಒಟ್ಟು ವಾರ್ಷಿಕ ವರಮಾನ ರೂ.2.00 ಲಕ್ಷದ ಮಿತಿಯೊಳಗೆ ಇರಬೇಕು.
ಆ) ಆಯ್ಕೆ ಹಾಗೂ ಅನುಷ್ಠಾನ:
1.ವಸತಿ ಸೌಕರ್ಯವನ್ನು ಒದಗಿಸಲು ಕೋರಿ ಬರುವ ಎಲ್ಲಾ ಪ್ರಸ್ತಾವನೆಗಳನ್ನು ಕರ್ನಾಟಕ ಅಲೆಮಾರಿ/ ಅರೆಅಲೆಮಾರಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಮಂಡಿಸಲಾಗುವುದು.
ಲಭ್ಯವಿರುವ ಅನುದಾನವನ್ನು ಆಧರಿಸಿ, ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
2.ಈ ಯೋಜನೆಯನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಸರ್ಕಾರದ ಇತರೆ ವಸತಿ ಯೋಜನೆಗಳ ಘಟಕ ವೆಚ್ಚವು ಅಲೆಮಾರಿ/
ಅರೆಅಲೆಮಾರಿ ಜನಾಂಗಗಳಿಗೂ ಅನ್ವಯವಾಗುತ್ತದೆ (ಘಟಕ ವೆಚ್ಚ ರೂ.2.00 ಲಕ್ಷಗಳು ಇದ್ದು, ಇದರಲ್ಲಿ ಸಹಾಯಧನ ರೂ.1.20 ಲಕ್ಷ).
3.ನಿವೇಶನ ರಹಿತರಿಗೆ ವಸತಿ ನಿವೇಶನ ಒದಗಿಸಲು ಜಮೀನು ಖರೀದಿ:

ಅಲೆಮಾರಿ/ ಅರೆಅಲೆಮಾರಿ ಜನಾಂಗದ ಹೆಚ್ಚಿನ ಕುಟುಂಬಗಳು ನಿವೇಶನವಿಲ್ಲದೆ ವಸತಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವರನ್ನು ಒಂದು ಕಡೆ ನೆಲೆ ನಿಲ್ಲುವಂತೆ ಮಾಡಲು
ನಿವೇಶನವನ್ನು ಒದಗಿಸಿ ವಸತಿ ಸೌಲಭ್ಯವನ್ನು ಕಲ್ಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನವನ್ನು ಹಂಚಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ
ಕೈಗೊಳ್ಳಲಾಗುತ್ತದೆ. ಸರ್ಕಾರಿ ಜಮೀನು ಲಭ್ಯವಾಗದೇ ಇರುವ ಕಡೆ ಖಾಸಗಿ ಜಮೀನನ್ನು ಖರೀದಿಸಿ ನಿವೇಶನ ಹಂಚಿಕೆಯನ್ನು ಮಾಡಲಾಗುವುದು.
ಇ) ಆಯ್ಕೆ ಹಾಗೂ ಮಂಜೂರಾತಿ:
1.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಆಸಕ್ತ ಮಾರಾಟಗಾರರಿಂದ ಜಮೀನಿನ ದಾಖಲೆಗಳು, ದರದ ವಿವರ ಹಾಗೂ ಮಾರಾಟ ಮಾಡಲು ಒಪ್ಪಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ಪಡೆಯಬೇಕು.
2.ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಜಮೀನು ಖರೀದಿ ಸಮಿತಿಯ ಸಭೆಯಲ್ಲಿ ಜಮೀನಿನ ದಾಖಲೆಗಳನ್ನು ಹಾಗೂ ದರವನ್ನು ಪರಿಶೀಲಿಸಿ ಖರೀದಿಸಬಹುದಾದ ದರವನ್ನು ನಿರ್ಣಯಿಸಿ ಪ್ರಸ್ತಾವನೆಯನ್ನು
ನಡವಳಿಯೊಂದಿಗೆ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.
3.ನಿಯಮಾನುಸಾರ ಪರಿಶೀಲಿಸಿ ಅನುದಾನ ಬಿಡುಗಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು.
7) ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನ ಮಾಡಲಾಗುತ್ತಿರುವ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಲೆಮಾರಿ/ ಅರೆಅಲೆಮಾರಿ
ಜನಾಂಗದವರ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲು ವಿಶೇಷ ಯೋಜನೆ:
ಅಲೆಮಾರಿ/ ಅರೆಅಲೆಮಾರಿ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸಕೃತಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಇತರೆ ಜಾತಿಗಳವರೊಡನೆ ಸ್ಪರ್ಧಿಸಿ
ಸೌಲಭ್ಯ ಪಡೆಯುವ ಚೈತನ್ಯ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಅಲೆಮಾರಿ/
ಅರೆಅಲೆಮಾರಿ ಸಮುದಾಯದವರಿಗೆ ಸೌಲಭ್ಯ ಕಲ್ಪಿಸಲು ಮತ್ತು ಅವರ ಸ್ವಯಂ ಉದ್ಯೋಗಕ್ಕಾಗಿ ಸೂಕ್ತ ತರಬೇತಿಯನ್ನು ನೀಡಲು ನಿಯಮನುಸಾರ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗುತ್ತದೆ.
1. ಭೂ ಒಡೆತನ ಯೋಜನೆ
2. ಗಂಗಾ ಕಲ್ಯಾಣ ಯೋಜನೆ
3. ಅರಿವು - ಶೈಕ್ಷಣಿಕ ಸಾಲ ಯೋಜನೆ
4. ಸ್ವಉದ್ಯೋಗಕ್ಕಾಗಿ ಸಾಲ ಮತ್ತು ಸಹಾಯ ಯೋಜನೆ