2019-20ನೇ ಸಾಲಿನಲ್ಲಿ “ಡಿ.ದೇವರಾಜ ಅರಸು ಪ್ರತಿಭಾ ಪುಸ್ಕಾರ” (ಎಸ್.ಎಸ್.ಎಲ್.ಸಿ/ದ್ವೀತಿಯ ಪಿ.ಯು.ಸಿ) ಕ್ಕಾಗಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಅರ್ಜಿ ಪ್ರತಿ ಮತ್ತು ದಾಖಲೆಗಳ ಪ್ರತಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 26.08.2019 ಸಂಜೆ 5.30 ಗಂಟೆ ವರೆಗೆ ವಿಸ್ತರಿಸಲಾಗಿದೆ. 2019-20-ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವೃತ್ತಿಪರ, ಸ್ನಾತಕೋತ್ತರ, ನರ್ಸಿಂಗ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಅಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು:31.08.2019, ಸಮಯ 5.00 PM ರ ವರೆಗೆ ವಿಸ್ತರಿಸಲಾಗಿದೆ. ದಿನಾಂಕ: 1.1.2019 ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ಅಂತಿಮ ಪದಕ್ರಮ ಪಟ್ಟಿಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರಡು ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು-2019 2019-20 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ನೀಡಲಾಗಿರುವ ನವೀಕರಣ ಹಾಗೂ ಹೊಸ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ (ಕ್ರಮ: ಇಲಾಖೆಯ ಸಿಬ್ಬಂದಿ ಮಾತ್ರ). ದಿನಾಂಕ: 1.1.2019ರಂದು ಇದ್ದಂತೆ ಹೊರಡಿಸಿರುವ ಎಲ್ಲಾ ವೃಂದದ ನೌಕರರ ತಾತ್ಕಾಲಿಕ ಪದಕ್ರಮ ಪಟ್ಟಿಗಳು. ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್ ಕನ್ನಡ | English
ಹಿಂದಿನ ಪುಟಕ್ಕೆ
ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ:
ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 4225-03-277-2-06) (2019-20ನೇ ಸಾಲಿನ ಆಯವ್ಯಯ ರೂ.32920.00 ಲಕ್ಷ)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2438 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ 1325 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದ್ದು 82 ವಿದ್ಯಾರ್ಥಿನಿಲಯಗಳು ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 1031 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿನ ನಿಲಯಾರ್ಥಿಗಳಿಗೆ ಅಗತ್ಯವಾದ ಸ್ಥಳಾವಕಾಶ, ಶೌಚಾಲಯ, ಸ್ನಾನಗೃಹದಂತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.

ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಆಯವ್ಯಯದ ಲಭ.್ಯತೆಯನುಸಾರ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು ಪ್ರಸ್ತುತ 340 ವಿದ್ಯಾರ್ಥಿನಿಲಯಗಳ ಕಟ್ಟಡಗಳ ನಿರ್ಮಾಣ ಕಾರ್ಯವು ವಿವಿಧ ಹಂತದಲ್ಲಿರುತ್ತವೆ.

2019-20 ನೇ ಸಾಲಿನಲ್ಲಿ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳಡಿ ಕೆಳಕಂಡಂತೆ ರೂ.32920.00 ಲಕ್ಷ ಹಣಾವಕಾಶವನ್ನು ಒದಗಿಸಲಾಗಿದೆ.

ಕ್ರ.ಸಂ ಆಬ್ಜೆಕ್ಟಿವ್ ಕೋಡ್ ವಿವರ ಒದಗಿಸಿರುವ ಆಯವ್ಯಯ (ರೂ. ಲಕ್ಷಗಳಲ್ಲಿ)
1 133 ವಿಶೇಷ ಅಭಿವೃದ್ದಿ ಯೋಜನೆ 8296.00
2 386 ಹಾಸ್ಟೆಲ್ ಕಟ್ಟಡಗಳ ನಿರ್ಮಾಣ- ನಿರ್ಮಾಣ 15556.00
3 422 ಪರಿಶಿಷ್ಟ ಜಾತಿ ಉಪಯೋಜನೆ 6081.00
4 423 ಗಿರಿಜನ ಉಪಯೋಜನೆ 2287.00
ಒಟ್ಟು 32920.00

ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ 2018-19 ರಿಂದ 84 ಸಿ.ಎ. ನಿವೇಶನಗಳನ್ನು ಸಹ ಖರೀದಿಸಲಾಗಿದೆ. ಪ್ರಸ್ತುತ ಒಟ್ಟು 696 ನಿವೇಶನಗಳು ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಲಭ್ಯವಿರುತ್ತವೆ.