ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ತಾತ್ಕಾಲಿಕ ಪರಿಷ್ಕೃತ ಪದಕ್ರಮ ಪಟ್ಟಿಗಳು . 2017-18 ನೇ ಸಾಲಿನಲ್ಲಿ-ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಹಾಗೂ ಶುಲ್ಕ ವಿನಾಯಿತಿಗೆ ಆರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07.12.2017 . ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್
ಹಿಂದಿನ ಪುಟಕ್ಕೆ
ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ:
ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ 100 ಅರ್ಹ ವಿದ್ಯಾರ್ಥಿಗಳಿಗೆ
‘ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ’:( 2015-16ನೇ ಸಾಲಿಗೆ ಮಾತ್ರ )
(2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ
ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ/ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
ವಾರ್ಷಿಕ ಗರಿಷ್ಠ ರೂ.10.00 ಲಕ್ಷದಂತೆ ಧನಸಹಾಯ ನೀಡಲಾಗುತ್ತದೆ.
ನಿಗದಿಪಡಿಸಿರುವ ಅರ್ಹತೆಗಳು:
1.ಭಾರತ ದೇಶದ ಪ್ರಜೆಯಾಗಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
2.ಸ್ನಾತಕೋತ್ತರ ಪದವಿ/ಪಿ.ಹೆಚ್.ಡಿ/ಸಂಶೋಧನೆ- ಸಂಬಂಧಪಟ್ಟ ಪದವಿ/ಸ್ನಾತಕೋತ್ತರ
ಪದವಿಯಲ್ಲಿ ಕನಿಷ್ಠ ಶೇ.60 ಅಂಕಗಳು ಅಥವಾ ಸಮಾನವಾದ ಗ್ರೇಡ್ ಪಡೆದಿರಬೇಕು.
3.ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಸರಿಯಾಗಿ 35 ವರ್ಷದ
ಮಿತಿಯೊಳಗಿರಬೇಕು.
4.ಆದಾಯಮಿತಿ: ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ಆದಾಯ ರೂ.6.00 ಲಕ್ಷ
5ಧನಸಹಾಯದ ಮೊತ್ತ:
ಅ) ವಾರ್ಷಿಕವಾಗಿ ಗರಿಷ್ಟ ರೂ.10.00 ಲಕ್ಷ ಅಥವಾ ವಾಸ್ತವ ವೆಚ್ಚ ಇವೆರಡರಲ್ಲಿ ಯಾವುದು ಕಡಿಮೆಯೋ
ಆ ಮೊತ್ತವನ್ನು ನೀಡಲಾಗುವುದು.
ಆ) ಒಂದು ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಧನಸಹಾಯವನ್ನು ನೀಡಲಾಗುವುದು.
6) ಧನ ಸಹಾಯದ ಅವಧಿ
ಅ) ಸ್ನಾತಕೋತ್ತರ ಪದವಿ - ಗರಿಷ್ಠ 2 ವರ್ಷ ಅಥವಾ ಕೋರ್ಸ್ ಮುಕ್ತಾಯದ ಅವಧಿಯಲ್ಲಿ ಯಾವುದು
ಮೊದಲೋ ಆ ಅವಧಿಯನ್ನು ಪರಿಗಣಿಸಲಾಗುವುದು.
ಆ) ಪಿಎಚ್.ಡಿ/ಸಂಶೋಧನೆ - ಗರಿಷ್ಠ 3 ವರ್ಷ ಅಥವಾ ಕೋರ್ಸ್ ಮುಕ್ತಾಯದ ಅವಧಿಯಲ್ಲಿ ಯಾವುದು
ಮೊದಲೋ ಆ ಅವಧಿಯನ್ನು ಪರಿಗಣಿಸಲಾಗುವುದು.
7) ಆಯ್ಕೆ ವಿಧಾನ – ಮೂರು ಹಂತಗಳನ್ನು ಒಳಗೊಂಡಿದೆ.
ಅ) ವಿದ್ಯಾರ್ಥಿಯಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ.
ಆ) ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ
ಮತ್ತು ಮನೆ ಭೇಟಿ ಮಾಡಿ ಸ್ಥಳ ಪರಿಶೀಲನೆ.
ಇ) ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂದರ್ಶನ.
ನಿಗದಿಪಡಿಸಿರುವ ಮೀಸಲಾತಿ
ಪ್ರವರ್ಗ ಶೇಕಡವಾರು
ಪ್ರವರ್ಗ-1 24%
ಪ್ರವರ್ಗ-2ಎ 46%
ಪ್ರವರ್ಗ-3ಎ 14%
ಪ್ರವರ್ಗ-3ಬಿ 16%
ಒಟ್ಟು 100%
(ಒಂದು ವೇಳೆ, ವೈದ್ಯಕೀಯ ಕಾರಣಗಳಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅಂತಹವರು, ವೈದ್ಯಕೀಯ
ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.)
7. ಅ) ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹವರು ಅರ್ಹರಿರುವುದಿಲ್ಲ.(ಉದಾ: ಬಿ.ಎ ನಂತರ ಬಿ.ಕಾಂ,
ಎಂ.ಎ (ಕನ್ನಡ) ನಂತರ ಎಂ.ಎ (ಇಂಗ್ಲೀಷ್), ಬಿ.ಎಡ್ ನಂತರ ಎಲ್.ಎಲ್.ಬಿ, ಇತ್ಯಾದಿಗಳಿಗೆ ಪ್ರವೇಶ ಪಡೆದಿದ್ದಲ್ಲಿ)
ಆ) ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಕೋರ್ಸಿನ ಅವಧಿಯಲ್ಲಿ ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಿದ್ದಲ್ಲಿ,
ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಇ) ಕಲೆ, ವಿಜ್ಞಾನ, ಹಾಗೂ ವಾಣಿಜ್ಯ ಕೋರ್ಸುಗಳ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣ / ಅನುತ್ತೀರ್ಣರಾದವರು ಅಂಗೀಕೃತ
ವೃತ್ತಿಪರ ಅಥವಾ ತಾಂತ್ರಿಕ ಸರ್ಟಿಫಿಕೇಟ್, ಡಿಪ್ಲೋಮ, ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ, ಹಾಗೂ ಇತರೆ ರೀತಿ ಅರ್ಹರಿದ್ದಲ್ಲಿ ಅವರು
ಈ ಯೋಜನೆಯ ಅಡಿ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಕೋರ್ಸುಗಳ ಬದಲಾವಣೆ ಮಾಡಿಕೊಂಡವರು ಅರ್ಹರಿರುವುದಿಲ್ಲ.
ಈ) ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
8. ಪ್ರತಿ ಮಾಹೆ ವಿದ್ಯಾರ್ಥಿಯ ತರಗತಿ ಹಾಜರಾತಿ ಕನಿಷ್ಟ ಶೇ.75 ರಷ್ಟಿರಬೇಕು.